

ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಸೈನ್ಸ್ ಫಿಕ್ಷನ್ ‘ಲಂಬೋದರ 2.0’ ಚಿತ್ರ ಈಗಾಗಲೇ ಹಲವು ವಿಶೇಷತೆಗಳಿಂದ ಸದ್ದು ಮಾಡಿದೆ. ಈ ಚಿತ್ರದಲ್ಲಿ ಯುವ ಉದ್ಯಮಿ ಅನಿಲ್ ಶೆಟ್ಟಿ, ಬಾಲಿವುಡ್ನ ಸಾಚಿ ಬಿಂದ್ರಾ ಮುಖ್ಯಭೂಮಿಕೆಯಲ್ಲಿದ್ದು, ಹಿಂದಿ ನಟ ಕುನಾಲ್ ಕಪೂರ್ ಕಲಾಬಳಗದಲ್ಲಿದ್ದಾರೆ. ಇನ್ನು ‘ಜಿಯಾ’ ಎಂಬ ರೋಬಾಟ್ ಅಭಿನಯಿಸುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆ. ಇದೀಗ ಚಿತ್ರತಂಡ ಈ ನಾಲ್ಕೂ ಪಾತ್ರಗಳನ್ನು ಪರಿಚಯಿಸಿದ್ದು, ಅನಿಲ್ (ಅವ್ಯಕ್ತ), ಸಾಚಿ (ಸಮಯ), ಕುನಾಲ್ (ರಾಘವ್), ರೊಬಾಟ್ (ಜಿಯಾ) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಾಲ್ವರ ಜತೆಗೆ ಮತ್ತೊಂದು ಹೊಸ ಪಾತ್ರವನ್ನು ಪರಿಚಯಿಸಿದ್ದು, ಎಐ ತಂತ್ರಜ್ಞಾನದ ಮೂಲಕ ಪೌರಾಣಿಕ ಕೃಷ್ಣನನ್ನು ಸೃಷ್ಟಿಸಲಾಗಿದೆ. ಆ ಮೂಲಕ ಆಧುನಿಕ ಜಗತ್ತಿನ ಕಥೆಯಲ್ಲಿ ಪೌರಾಣಿಕ ಪುರುಷನ ಎಂಟ್ರಿಯಾಗಿದೆ. ಕನ್ನಡ ಮತ್ತು ಹಿಂದಿಯಲ್ಲಿ ಮೂಡಿಬರುತ್ತಿರುವ ‘ಲಂಬೋದರ 2.0’ ಚಿತ್ರಕ್ಕೆ ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್ ಸಾಥ್ ನೀಡುತ್ತಿದ್ದಾರೆ. ನ.20ರಂದು ಸಿನಿಮಾ ತೆರೆಗೆ ಬರಲಿದೆ. ಅನಿಲ್, ಸಾಚಿ ಜತೆಗೆ ಮೇಘನಾ ಗಾಂವ್ಕರ್, ಮ್ಯಾಕ್ ಡಿ’ಸೋಜಾ ಕಲಾಬಳಗದಲ್ಲಿದ್ದಾರೆ.