ಕಾಶಿಯಲ್ಲಿ ‘ಲಕ್ಷ್ಮೀಪುತ್ರ’ : ಉತ್ತರ ಭಾರತದ ಪುಣ್ಯ ಕ್ಷೇತ್ರದಲ್ಲಿ ಶೂಟಿಂಗ್ ಪೂರ್ಣಗೊಳಿಸಿದ ಚಿಕ್ಕಣ್ಣ

ಕಾಶಿಯಲ್ಲಿ ಲಕ್ಷ್ಮೀಪುತ್ರ ತಂಡ
ಕಾಶಿಯಲ್ಲಿ ಲಕ್ಷ್ಮೀಪುತ್ರ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಕಾಶಿ, ವಾರಾಣಸಿಯಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ
  • ಚಿಕ್ಕಣ್ಣ, ತಾರಾ ಅನುರಾಧ ಸೇರಿ 70ಕ್ಕೂ ಅಧಿಕ ಕಲಾವಿದರು ಭಾಗಿ
  • ಮೇ ಅಥವಾ ಜೂನ್ ತೆರೆಗೆ ಬರಲು ಸಿದ್ಧವಾದ ಸಿನಿಮಾ
ಬೆಂಗಳೂರು: ‘ಉಪಾಧ್ಯಕ್ಷ’ ಯಶಸ್ಸಿನ ಬಳಿಕ ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರ ‘ಲಕ್ಷ್ಮೀಪುತ್ರ;. ಕಳೆದ ವರ್ಷ ಸೆಟ್ಟೇರಿದ್ದ ಈ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದೆ. ನಿರ್ದೇಶಕ ಎ.ಪಿ.ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿಕ್ಕಣ್ಣಗೆ ವಂದಿತಾ ಜೋಡಿಯಾಗಿದ್ದು, ಇತ್ತೀಚೆಗೆ ನಟಿಯನ್ನು ಚಿತ್ರತಂಡ ವಿಭಿನ್ನವಾಗಿ ಪರಿಚಯಿಸಿತ್ತು. ಇದೀಗ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ನೀಡಿದ್ದು, ‘ಲಕ್ಷ್ಮೀಪುತ್ರ’ ತಂಡವು ಮೂರು ದಿನಗಳ ಕಾಲ ಉತ್ತರ ಭಾರತದ ಪುಣ್ಯ ಸ್ಥಳಗಳಲ್ಲಿ ಶೂಟಿಂಗ್ ಮುಗಿಸಿ ತವರಿಗೆ ಮರಳಿದೆ. ‘‘ಲಕ್ಷ್ಮೀಪುತ್ರ’ ಶೂಟಿಂಗ್ ಅಂತಿಮ ಹಂತದಲ್ಲಿದೆ. ಇತ್ತೀಚೆಗೆ ಕಾಶಿ, ವಾರಾಣಸಿಯಲ್ಲಿ ಮೂರು ದಿನಗಳ ಕಾಲ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಿದ್ದೇವೆ. ನಟ ಚಿಕ್ಕಣ್ಣ, ತಾರಾ ಅನುರಾಧ, ಧರ್ಮಣ್ಣ ಕಡೂರು ಸೇರಿ 60ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದಾರೆ. ಕಾಶಿಯ ಗಂಗಾನದಿ ತೀರ, ಮಣಿಕರ್ಣಿಕಾ ಘಾಟ್ ಸೇರಿ ಕಾಶಿಯ ಬೀದಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡು ದಿನಗಳ ಮಾತಿನ ಭಾಗದ ಶೂಟಿಂಗ್ ಮಾತ್ರ ಬಾಕಿಯಿದೆ. ಅದನ್ನು ಕೂಡ ಬೇಗ ಮುಗಿಸಿಕೊಂಡು, ಮೇ ಅಥವಾ ಜೂನ್‌ನಲ್ಲಿ ‘ಲಕ್ಷ್ಮೀಪುತ್ರ’ ತೆರೆಗೆ ತರುವ ಯೋಜನೆಯಿದೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಅರ್ಜುನ್ ಜನ್ಯ ಸಂಗೀತ, ಎ.ಪಿ.ಅರ್ಜುನ್ ಕಥೆ, ಚಿತ್ರಕಥೆ, ಸಾಹಿತ್ಯ, ಗಿರೀಶ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net