ನಟಿ ಕೃಷಿ ಮನೆಯಲ್ಲೇ ಸಿಕ್ಕಿಬಿದ್ದ ವೈಶಾಖ್; ಅರವಿಂದ್ ರೆಡ್ಡಿಗೆ 7 ಕೋಟಿ ರೂ. ಬೆದರಿಕೆ; ಹಣ ದೋಚಲು ಇಬ್ಬರ ಮಾಸ್ಟರ್​​​ ಪ್ಲ್ಯಾನ್​​...?!

ಅರವಿಂದ್​​ ರೆಡ್ಡಿ, ಕೃಷಿ ತಾಪ್ಪಂಡ, ವೈಶಾಖ್​
ಅರವಿಂದ್​​ ರೆಡ್ಡಿ, ಕೃಷಿ ತಾಪ್ಪಂಡ, ವೈಶಾಖ್​
Published on

ಅರವಿಂದ ರೆಡ್ಡಿ, ಎವಿಆರ್​ ಗ್ರೂಪ್​ ಮಾಲೀಕ. ಕಳೆದ ಕೆಲ ತಿಂಗಳಿಂದ ನಟಿ ವಿಚಾರಕ್ಕೆ ಇವರು ಭಾರೀ ಸುದ್ದಿಯಲ್ಲಿದ್ದಾರೆ. ಮೋಸ, ವಂಚನೆ, ಅನ್ಯಾಯ, ಬೆದರಿಕೆ ಅಂತೆಲ್ಲಾ ದೂರು ದಾಖಲಿಸಿ ಕಾನೂನು ಹೋರಾಟ ಮಾಡ್ತಿದ್ದಾರೆ. ಮತ್ತೊಂದ್ಕಡೆ ರೆಡ್ಡಿಯಿಂದ ಕಿರುಕುಳ ಅಂತ ನಟಿ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ರೆಡ್ಡಿ ವಿರುದ್ಧ ಕಿರುಕುಳ ದೂರು ನೀಡಿದ್ದ ನಟಿ ಗೆಳೆಯ ಅರೆಸ್ಟ್​ ಆಗಿದ್ದಾನೆ.

AVR ಗ್ರೂಪ್ ಮಾಲೀಕ ಅರವಿಂದ ರೆಡ್ಡಿಯಿಂದ ನನಗೆ ಕಿರುಕುಳ ಆಗ್ತಾ ಇದೆ ಅಂತ ನಟಿ ದೂರು ನೀಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಅರವಿಂದ ರೆಡ್ಡಿಗೆ ಜೀವಬೆದರಿಕೆ ಪತ್ರವೊಂದು ಬಂದಿತ್ತು. ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರೆಡ್ಡಿ ದೂರು ದಾಖಲಿಸಿದ್ರು. ಈಗ ಪ್ರಕರಣದ ತನಿಖೆ ನಡೆಸ್ತಿರೋ ಪೊಲೀಸರು ರೆಡ್ಡಿ ವಿರುದ್ಧ ಕಿರುಕುಳ ದೂರು ನೀಡಿದ್ದ ನಟಿ ಗೆಳೆಯನನ್ನೇ ಅರೆಸ್ಟ್​ ಮಾಡಿದ್ದಾರೆ.

ಕೃಷಿ ತಪ್ಪಂಡ ಗೆಳೆಯ ಬಂಧನ ಮಾಡಿದ ಪೊಲೀಸರು...!

ಪ್ರಕರಣ ಬೆನ್ನು ಹತ್ತಿದ ಪೊಲೀಸರಿಂದ ಕೃಷಿ ಗೆಳೆಯ ವೈಶಾಕ್​ನನ್ನ ಬಂಧಿಸಿದ್ದಾರೆ. ಬೆದರಿಕೆ ಹಾಕಿ ಖುಷಿ ತಪ್ಪಂಡ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

ತನ್ನ ಗೆಳೆಯನ ಮೂಲಕ ಬ್ಲಾಕ್ ಮೇಲ್ ಗೆ ಯತ್ನಿಸಿದ್ರಾ ನಟಿ ಖುಷಿ ತಪ್ಪಂಡ..?

ಅರವಿಂದರೆಡ್ಡಿಗೆ ಬೆದರಿಕೆ ಪತ್ರ ಬರೆಯಲು ಕಾರಣ ಏನು ಅಂತಾ ನೋಡೋದಾದ್ರೆ...ಪ್ರಕರಣ ಸಂಬಂಧ ಖುಷಿ ತಪ್ಪಂಡಗೆ ನೋಟಿಸ್​​ ಜಾರಿ ಮಾಡಿದ್ದಾರೆ. ಗಳೆಯ ವೈಶಾಖ್​​ ಸಹಾಯ ಪಡೆದುಕೊಳ್ಳುವ ಮೂಲಕ ಕೃಷಿ ಅರವಿಂದ್​​ ರೆಡ್ಡಿ ಅವರಿಂದ 7 ಕೋಟಿ ಹಣ ಲಪಟಾಯಿಸಲು ಈ ಪತ್ರದ ಮೂಲಕ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇಬ್ಬರೂ ಪ್ರೀ ಪ್ಲ್ಯಾನ್​ ಮಾಡಿ ಅರವಿಂದ್​​ ರೆಡ್ಡಿಯವರು ಹೆಸರು ಹಾಳು ಮಾಡಿ ದುಡ್ಡು ದೋಚಲು ಕೃಷಿ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಪೊಲೀಸರ ದಿಕ್ಕು ತಪ್ಪಿಸಲು ಬೇರೆ ಕಡೆ ಇಂದ ಕೊರಿಯರ್...!

ಇನ್ನೂ ಈ ಬ್ಲಾಕ್​ಮೇಲ್​​ಗೆ ಗ್ಯಾರೇಜ್ ಕೆಲಸ ಮಾಡ್ತಿದ್ದ ಬಾಲಕನನ್ನ ಬಳಕೆ ಮಾಡಿಕೊಂಡಿರೋ ವಿಚಾರ ಬಯಲಾಗಿದೆ. ಬನಶಂಕರಿ ಬಳಿರುವ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಪತ್ರ ಕಳಿಸಲಾಗಿತ್ತು. ಪೊಲೀಸರ ದಿಕ್ಕು ತಪ್ಪಿಸೋಕಂತಾನೇ ಬೇರೆ ಕಡೆಯಿಂದ ಕೊರಿಯರ್ ಮಾಡಲಾಗಿತ್ತು, ತನಿಖೆಗಿಳಿದ ಪೊಲೀಸರಿಂದ ಮೊದಲು ಗ್ಯಾರೇಜ್ ಬಾಲಕ ವಶಕ್ಕೆ ಪಡೆದಿದ್ದು, ಯಾರು ಲೆಟರ್​ ಕೊಟ್ಟಿದ್ದು ಅಂತ ವಿಚಾರಿಸಿದ್ದಾರೆ. ಆಗ ಬಾಲಕ ಬಾಸ್ ಹೇಳಿದ್ರು ಕೊರಿಯರ್ ಮಾಡಿದೆ ಎಂದಿದ್ದ. ಬಳಿಕ ಬಾಸ್ ಯಾರು ಎಂದು ಪತ್ತೆ ಮಾಡಿದ ಪೊಲೀಸರು, ನಟಿ ಗೆಳೆಯನಾದ ವೈಶಾಕನೇ ಪತ್ರ ಕಳಿಸಿರೋದು ಅನ್ನೋದನ್ನ ಕನ್ಫರ್ಮ್​ ಮಾಡ್ಕೊಂಡು ಅರೆಸ್ಟ್​ ಮಾಡಿದ್ದಾರೆ.

ಬಾಲಕ ಬಾಯ್ಬಿಟ್ಟ ರಹಸ್ಯ!

ಬ್ಲಾಕ್​ಮೇಲ್​​ಗೆ ಗ್ಯಾರೇಜ್ ಕೆಲಸ ಮಾಡ್ತಿದ್ದ ಬಾಲಕನ ಬಳಕೆ

ಬನಶಂಕರಿ ಬಳಿರುವ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಪತ್ರ

ಪೊಲೀಸರ ದಿಕ್ಕು ತಪ್ಪಿಸಲು ಬೇರೆ ಕಡೆಯಿಂದ ಕೊರಿಯರ್

ತನಿಖೆಗಿಳಿದ ಪೊಲೀಸರಿಂದ ಮೊದಲು ಗ್ಯಾರೇಜ್ ಬಾಲಕ ವಶಕ್ಕೆ

ಬಾಸ್ ಹೇಳಿದ್ರು ಕೊರಿಯರ್ ಮಾಡಿದೆ ಎಂದಿದ್ದ ಬಾಲಕ

ಬಳಿಕ ಬಾಸ್ ಯಾರು ಎಂದು ಪತ್ತೆ ಮಾಡಿದ ಪೊಲೀಸರು

ನಟಿ ಗೆಳೆಯನಾದ ವೈಶಾಕನೇ ಪತ್ರ ಕಳಿಸಿರೋದು ಅಂತ ಅರೆಸ್ಟ್​

ಇನ್ನು ಆರೋಪಿ ನಟಿಯ ಮನೆಯಲ್ಲೇ ಮೊಬೈಲ್​ ಬಚ್ಚಿಟ್ಟಿದ್ದಾನೆ ಎನ್ನಲಾಗ್ತಿದ್ದು, ಸದ್ಯ ಪೊಲೀಸರು ಆ ಮೊಬೈಲ್​ ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಹಾಗೂ ಬಿಗ್​​ಬಾಸ್ ಮಾಜಿ ಸ್ಪರ್ಧಿ, ನಟಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಅದೇನೇ ಇರ್ಲಿ ರೆಡ್ಡಿ ವಿರುದ್ಧ ಧೈರ್ಯವಾಗಿ ಕಾನೂನು ಹೋರಾಟ ಆರಂಭಿಸಿದ್ದ ನಟಿ ತನ್ನ ಗೆಳೆಯನ ಮೂಲಕ ಬ್ಲಾಕ್ ಮೇಲ್​​ಗೆ ಯತ್ನಿಸಿದ್ರಾ ಅನುಮಾನ ದಟ್ಟವಾಗಿದೆ. ಮತ್ತೊಂದೆಡೆ ಸುಖಾ ಸುಮ್ಮನೆ ದುಡ್ಡು ದೋಚಲು ಉದ್ಯಮಿ ಅರವಿಂದ್​​ ರೆಡ್ಡಿಯವರನ್ನ ಈ ವಿಚಾರಕ್ಕೆ ಎಳೆ ತರಲಾಗಿದೆ ಎಂದೂ ಹೇಳಲಾಗುತ್ತಿದೆ. (ಏಜೆನ್ಸೀಸ್​​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net