ಬೆಂಗಳೂರು: ಸುಧೀರ್ ಅತ್ತಾವರ ನಿರ್ದೇಶನದ ಮತ್ತು ತ್ರಿವಿಕ್ರಮ್ ಸಪಲ್ಯ ನಿರ್ಮಾಣದ 'ಕೊರಗಜ್ಜ' ಚಿತ್ರತಂಡವು ರಿಲೀಸ್‌ಗೆ ಸಿದ್ಧವಾಗಿದೆ. ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಶ್ರುತಿ, ಭವ್ಯಾ ತಾರಾಗಣದಲ್ಲಿರುವ ಈ ಚಿತ್ರವು ಸದ್ಯ ಪ್ಯಾನ್ ಇಂಡಿಯಾ ಪ್ರಚಾರಕ್ಕೆ ಮುಂದಾಗಿದೆ. ಆದರೆ, ಇದಕ್ಕೀಗ ಮಾಲಿವುಡ್ ದಿಗ್ಗಜ ನಟನ ತಂಡದಿಂದ ಅಡಚಣೆ ಉಂಟಾಗಿದೆ.