ಅದು ಸ್ಟಾರ್ಟ್​ ಆಗಿದ್ದೇ ಅಲ್ಲಿಂದ.... ಪೈರಸಿ ವಿಚಾರಕ್ಕೆ ಕಿಚ್ಚನ ಖಡಕ್​ ನುಡಿ, ಎಚ್ಚರಿಕೆಯ 'ಮಾರ್ಕ್​' | Kichcha Sudeep

ಮಾರ್ಕ್​ ಸಂದರ್ಶನದಲ್ಲಿ ಕಿಚ್ಚ ಸುದೀಪ್​
ಮಾರ್ಕ್​ ಸಂದರ್ಶನದಲ್ಲಿ ಕಿಚ್ಚ ಸುದೀಪ್​
Published on

ಪ್ರಮುಖ ಮುಖ್ಯಾಂಶಗಳು

  • ಡಿ.25ಕ್ಕೆ ರಾಜ್ಯಾದ್ಯಂತ ಕಿಚ್ಚ ಸುದೀಪ್ ನಟನೆಯ 'ಮಾರ್ಕ್​' ರಿಲೀಸ್​
  • 'ಮಾರ್ಕ್​' ರಿಲೀಸ್​ಗೂ ಮುನ್ನ ವಿಜಯವಾಣಿ ಸಂದರ್ಶನದಲ್ಲಿ ಸುದೀಪ್​ ಮಾತು
  • ಪೈರಸಿ ಮಾಡುವ ಗುಂಪಿನ ವಿರುದ್ಧ ಕಿಚ್ಚ ಕಿಡಿ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ( Kichcha Sudeepa ​) ಅಭಿನಯದ ಬಹುನಿರೀಕ್ಷಿತ 'ಮಾರ್ಕ್'​ ನಾಳೆ (ಡಿ.25) ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್​ಗೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಪ್ರಚಾರ ಕೆಲಸಗಳಲ್ಲಿ ಸಖತ್ ಬಿಜಿಯಾಗಿರುವ ಸುದೀಪ್​, ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಸಿನಿಮಾಗೆ ಸಂಬಂಧಿಸಿದಂತೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು.

ಮೊದಲ ಸಂಭಾವನೆ 500 ರೂ.

ನನ್ನ ಮೊದಲ ಸಂಬಳ ಅಥವಾ ಸಂಭಾವನೆ ಅಂತ ಸಿಕ್ಕಿದ್ದು 'ಪ್ರತ್ಯರ್ಥ'ಕ್ಕಾಗಿ. ಅದು 500 ರೂ. ಆ ಹಣದಲ್ಲಿ ನನ್ನ ಗಾಡಿಗೆ ಪೆಟ್ರೋಲ್​ ಹಾಕಿಸಿಕೊಂಡೆ ಅಷ್ಟೇ. ಆಗೆಲ್ಲ ಬಹಳ ಕಡಿಮೆ. ಸಂಭಾವನೆ ಅಂತೇನಿಲ್ಲ. ಕೊಟ್ರೆ ಕೊಟ್ರು, ಇಲ್ಲ ಅಂದ್ರೆ ಇಲ್ಲ. ಆ ಸಮಯದಲ್ಲಿ ಕೆಲಸ ಕೊಡುವುದು ದೊಡ್ಡದಾಗಿತ್ತು. ನಾವ್ಯಾರು ಆಗ? ಏನೋ ಸಣ್ಣ-ಪುಟ್ಟ ಖರ್ಚಿಗೆಲ್ಲ ಕೊಡ್ತಿದ್ದರು. ಇವತ್ತಿಗೆ ಒಂದೊಳ್ಳೆ ಪೇಮೆಂಟ್ ಇದೆ, ಗೌರವವಿದೆ. ನಿಮ್ಮ ಸಮಯಕ್ಕೆ ಮೌಲ್ಯ ಕೊಟ್ಟು ಹಣ ಕೊಡುತ್ತಾರೆ. ಆ ಕಾಲಕ್ಕೆ ಸಿನಿಮಾ ಬೇರೆ ರೀತಿಯೇ ಇತ್ತು. ಅವಕಾಶ ಸಿಗ್ತಿರಲಿಲ್ಲ. ನಿರ್ಮಾಪಕರೆಲ್ಲ ದೊಡ್ಡ ರೇಂಜಿನಲ್ಲಿ ಇದ್ದರು ಎಂದರು.

ಪೈರಸಿ ಬಗ್ಗೆ ಕಿಚ್ಚಿನ ನುಡಿ

ಅದು ಸಾರ್ಟ್​ ಆಗಿದ್ದೇ ದೊಡ್ಡ ರೀತಿಯಲ್ಲಿ ಪೈಲ್ವಾನ್​ನಿಂದ. ಅಲ್ಲಿಂದ ಬಂದು ಬಂದು ಎಲ್ಲ ಬರುತ್ತಿವೆ. ಈ ವಿಷಯದಲ್ಲಿ ನಾವು ಹೋರಾಡಲೇ ಬೇಕು. ಈಗ ಒಂದು ದೊಡ್ಡ ತಂಡವನ್ನು ಕಟ್ಟಿದ್ದೀವಿ, ಕಾನೂನು ರೀತಿಯಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಬಹುದೋ, ಅದನ್ನೆಲ್ಲ ಫಾಲೋ ಮಾಡಿದ್ದೀವಿ. ಪ್ರತಿ ಚಿತ್ರದಲ್ಲಿ ಇಂಥಾ ಕೆಲಸ ಮಾಡುವವ ಹೊಸಬರು ಹುಟ್ಟಿಕೊಳ್ಳುತ್ತಿರುತ್ತಾರೆ. ನೀವು ಸತತ ಪ್ರಯತ್ನ ಮಾಡ್ತಿರಬೇಕು. ಯಾವುದೋ ಒಂದು ತಂಡ ಸಿಕ್ಕಿಕೊಂಡ್ರೆ ಅಲ್ಲಿಗೆ ಇದೆಲ್ಲ ಮುಗಿತು ಎಂದುಕೊಳ್ಳುವುದು ತಪ್ಪು ಎಂದಿದ್ದಾರೆ. ಸುದೀಪ್​ ಅವರ ಇನ್ನೂ ಹೆಚ್ಚಿನ ಮಾತುಕತೆ ತಿಳಿಯಲು ಕೆಳಗೆ ನೀಡಿರುವ ಸಂದರ್ಶನದ ಲಿಂಕ್​ ಕ್ಲಿಕ್​ ಮಾಡಿ.

'ಮಾರ್ಕ್​' vs '45'

'ಮಾರ್ಕ್​' ಚಿತ್ರದ ದಿನವೇ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರವಾದ ಅರ್ಜುನ್ ಜನ್ಯ ನಿರ್ದೇಶನದ, ಉಪೇಂದ್ರ, ರಾಜ್​ ಬಿ.ಶೆಟ್ಟಿ ಮತ್ತು ಶಿವರಾಜ್​ಕುಮಾರ್ ನಟಿಸಿರುವ '45' ಕೂಡ ತೆರೆ ಕಾಣುತ್ತಿದೆ. ಈ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಪೈಪೋಟಿಗೆ ಕನ್ನಡ ಚಿತ್ರಗಳು ಇಳಿದಿವೆ. ಇದು ತೀವ್ರ ಕುತೂಹಲ ಕೆರಳಿಸಿದೆ ನಿಜ. ಆದರೆ, ಇದೆಲ್ಲದರ ಮಧ್ಯೆ ಫ್ಯಾನ್ಸ್​ಗಳ ಸಮರ ಜೋರಾಗಿದೆ.

'ಸ್ಟಾರ್​ ವಾರ್'​ ಜತೆಗೆ 'ಫ್ಯಾನ್ಸ್ ವಾರ್'

ಈ ಎಲ್ಲ ಬೆಳವಣಿಗೆಗಳು ಸದ್ಯ ಸ್ಟಾರ್​ ವಾರ್​ ಜತೆಗೆ ಫ್ಯಾನ್ಸ್ ವಾರ್​ಗೂ ಸಾಕ್ಷಿಯಾಗಿದೆ. ಮತ್ತೊಂದೆಡೆ, ರಾಜ್​ ಬಿ.ಶೆಟ್ಟಿ, ಉಪೇಂದ್ರ ಮತ್ತು ಶಿವರಾಜ್​ಕುಮಾರ್​ ಅವರ ತ್ರಿಮೂರ್ತಿಗಳ ಸಂಗಮ '45' ಕೂಡ ಮಾರ್ಕ್​ ದಿನವೇ ರಿಲೀಸ್​ ಆಗುತ್ತಿರುವುದು ಕನ್ನಡ ಸಿನಿಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿವೆ. ಇದು ಇತರೆ ಚಿತ್ರರಂಗದ ಗಮನ ಸೆಳೆದಿದ್ದು, ಕನ್ನಡ ಸಿನಿಮಾಗಳ ಮೇಲೆ ಕಣ್ಣಾಯಿಸುವಂತೆ ಮಾಡಿದೆ. ಪ್ರತಿಬಾರಿ ನಮ್ಮ ಚಿತ್ರಗಳು ಅನ್ಯ ಭಾಷೆಯ ಫಿಲಂಗಳೊಂದಿಗೆ ಪೈಪೋಟಿ ನೀಡಬೇಕಿತ್ತು. ಆದರೀಗ, ನಮ್ಮದೇ ಚಿತ್ರಗಳು ಒಂದೇ ತಿಂಗಳಲ್ಲಿ, ಒಂದೇ ದಿನ ಜಿದ್ದಾಜಿದ್ದಿಗೆ ಬಿದ್ದಿರುವುದು ನಿಜಕ್ಕೂ ಗಮನಾರ್ಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net