ರಾಜ್ಗೆ ಚಿತ್ರದಲ್ಲಿ "ಒಂದು ಸರಳ ಪ್ರೇಮಕಥೆ' ಖ್ಯಾತಿಯ ತಮಿಳು ನಟಿ ಸ್ವಾತಿಷ್ಠ ಕೃಷ್ಣನ್ ಜೋಡಿಯಾಗಿದ್ದು, ಅರ್ಚನಾ ಕೊಟ್ಟಿಗೆ, ಅನಿರುದ್ಧ್ ಭಟ್, ಬಿ. ಸುರೇಶ್, ಗೋಪಾಲ್ ದೇಶಪಾಂಡೆ, ಗೌರವ್ ಶೆಟ್ಟಿ, ಜಹಾಂಗೀರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ.