ಜೂಮ್ ಮಾಡ್ಬೇಡಿ! : ಪಾಪರಾಜಿಗಳಿಗೆ ಎಚ್ಚರಿಸಿದ ಬಾಲಿವುಡ್ ನಟಿ ಕರಿಷ್ಮಾ ಕಪೂರ್

ಕರಿಷ್ಮಾ ಕಪೂರ್
ಕರಿಷ್ಮಾ ಕಪೂರ್
Published on

ಪ್ರಮುಖ ಮುಖ್ಯಾಂಶಗಳು

  • ಜೂಮ್ ಮಾಡಿ ಫೋಟೋ ತೆಗೆಯುವವರ ವಿರುದ್ಧ ಸ್ಯಾಂಡಲ್ ವುಡ್ ಬಳಿಕ ಬಾಲಿವುಡ್ ನಲ್ಲಿ ಆಕ್ರೋಶ
  • ಪಾಪರಾಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಟಿ ಕರಿಷ್ಮಾ
  • ನಟಿಯ ಬೆಂಬಲಕ್ಕೆ ನಿಂತ ಅಭಿಮಾನಿಗಳು
ಕೆಲ ದಿನಗಳ ಹಿಂದಷ್ಟೇ ನಟಿಯರ ಫೋಟೋ, ವಿಡಿಯೋಗಳನ್ನು ‘ಜೂಮ್ ಮಾಡುವವರ’ ವಿರುದ್ಧ ಸ್ಯಾಂಡಲ್‌ವುಡ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಅದರ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಬಹುತೇಕ ಸ್ಯಾಂಡಲ್‌ವುಡ್ ತಾರೆಯರು ಸಪ್ತಮಿ ಬೆಂಬಲಕ್ಕೆ ನಿಂತಿದ್ದರು. ಇದೀಗ ಇದು ಬಾಲಿವುಡ್‌ನಲ್ಲೂ ಸದ್ದು ಮಾಡಿದ್ದು, ಜೂಮ್ ಮಾಡುವವರ ವಿರುದ್ಧ ನಟಿ ಕರಿಷ್ಮಾ ಕಪೂರ್ ಗರಂ ಆಗಿದ್ದಾರೆ. ಇತ್ತೀಚಿಗಷ್ಟೇ ಹೊಸ ರಿಯಾಲಿಟಿ ಶೋ ಅನೌನ್ಸ್ ಆಗಿದ್ದು, ಅದರ ಪ್ರಚಾರ ಕಾರ್ಯಕ್ರಮದಲ್ಲಿ ಕರಿಷ್ಮಾ ಭಾಗವಹಿಸಿದ್ದಾರೆ. ವೇದಿಕೆ ಮೇಲೆ ಮಾತನಾಡಿ, ಹಿಂದಿರುಗುವಾಗ ಅಲ್ಲೇ ಇದ್ದ ಪಾಪರಾಜಿಗಳು ನಟಿಯ ಫೋಟೋ, ವಿಡಿಯೋ ಕ್ಲಿಕ್ ಮಾಡಲು ಬಂದಿದ್ದಾರೆ. ಆಗ ಕರಿಷ್ಮಾ, ‘ಹೆಚ್ಚು ಜೂಮ್ ಮಾಡಬೇಡಿ’ ಎಂದು ಎಚ್ಚರಿಸಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಕರಿಷ್ಮಾಗೆ ಹಲವು ನೆಟ್ಟಿಗರು ಬೆಂಬಲಿಸಿದ್ದಾರೆ. ಇನ್ನು ಜೂಮ್ ಮಾಡುವವರ ವಿರುದ್ಧ ಈ ಹಿಂದೆಯೂ ಬಾಲಿವುಡ್ ತಾರೆಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಶ್ರುತಿ ಹಾಸನ್, ಜಯಾ ಬಚ್ಚನ್, ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿ ಹಲವರು ಪಾಪರಾಜಿಗಳ ವಿರುದ್ಧ ಗರಂ ಆಗಿದ್ದರು. ಇದೀಗ ಈ ಸಾಲಿಗೆ ಕರಿಷ್ಮಾ ಕೂಡ ಸೇರಿಕೊಂಡಿದ್ದಾರೆ. 2024ರಲ್ಲಿ ತೆರೆಕಂಡ ‘ಮರ್ಡರ್ ಮುಬಾರಕ್’ ಬಳಿಕ ಕರಿಷ್ಮಾ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಸದ್ಯ ರಿಯಾಲಿಟಿ ಶೋವೊಂದರ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net