Appu Garage Review -
ಗ್ಯಾರೇಜ್ ಉಳಿಸಿಕೊಳ್ಳಲು ಗೆಳೆಯರ ಹೋರಾಟ(2.5 / 5)
ವಿಷ್ಣು (ವಿಷ್ಣು) ಮತ್ತು ಅಪ್ಪು (ಜೀವನ್) ಜೀವದ ಗೆಳೆಯರು. ಇಬ್ಬರೂ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ವಿಷ್ಣುಗೆ ಧನು ಮೇಲ್ ಲವ್, ಅಪ್ಪುಗೆ ರಾಧಾ ಮೇಲೆ ಪ್ರೀತಿ. ಗೆಳೆತನದ ಜತೆಗೆ ಕುಟುಂಬ, ಪ್ರೀತಿ ಅಂತ ತಮ್ಮ ಜೀವನಗಳಲ್ಲಿ ಆರಾಮಾಗಿರುತ್ತಾರೆ. ಅಷ್ಟರಲ್ಲಿ ಅವರು ಕೆಲಸ ಮಾಡುವ ಮೇಜರ್ ಧನರಾಜ್ (ಅವಿನಾಶ್) ಒಡೆತನದ ಅಪ್ಪು ಗ್ಯಾರೇಜ್ ಜಾಗದ ಮೇಲೆ ದುಷ್ಟರ ಕಣ್ಣು ಬೀಳುತ್ತದೆ. ಲೇಡಿರೌಡಿಗಳ ಮೂಲಕ ಆ ಗ್ಯಾರೇಜ್ನಲ್ಲಿ ದೆವ್ವ-ಭೂತಗಳ ಕಾಟವಿದೆ ಎಂದು ಕಥೆ ಕಟ್ಟಲು ಯತ್ನಿಸಿ ಈ ಗ್ಯಾಂಗ್ ಸೋಲುತ್ತದೆ. ನಂತರ ರೌಡಿ ಪಡೆ, ಗ್ಯಾರೇಜ್ಗೆ ನುಗ್ಗಿ ಬಂದು ಗಲಾಟೆ ಮಾಡಿ, ಅಲ್ಲಿನ ಹುಡುಗರನ್ನು ಓಡಿಸಲು ಯತ್ನಿಸಿ ಅದರಲ್ಲೂ ಒದೆ ತಿಂದು ಓಡುತ್ತದೆ. ಬಳಿಕ ಡ್ರಗ್ಸ್ ಮತ್ತು ಶಸ್ತ್ರಗಳನ್ನು ಇಟ್ಟು ಪೊಲೀಸರಿಗೆ ಹಿಡಿದುಕೊಡಲು ಯತ್ನಿಸಿ, ಅಲ್ಲೂ ಯಶಸ್ಸು ಕಾಣುವುದಿಲ್ಲ. ಈ ಅಪ್ಪು ಗ್ಯಾರೇಜ್ ಹೋರಾಟದ ಜತೆಗೆ ವಿಷ್ಣು ಮತ್ತು ಅಪ್ಪು ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದನ್ನೆಲ್ಲ ಈ ದೋಸ್ತಿಗಳು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದೇ ಕಥೆ. ಚಂದ್ರಚೂಡೇಶ್ವರ ರಾಜು ನಿರ್ದೇಶನದ ರೊಮ್ಯಾಂಟಿಕ್ ಆ್ಯಕ್ಷನ್ ಡ್ರಾಮಾ ಇದು. ಅದಕ್ಕೆ ಪೂರಕ ಎಂಬಂತೆ ಮೊದರ್ಲಧದಲ್ಲೇ ತಲಾ ಮೂರು ಆ್ಯಕ್ಷನ್ ಮತ್ತು ಹಾಡುಗಳು ಬಂದುಹೋಗುತ್ತವೆ. ಕೆಲವೆಡೆ ಲಿಂಕ್ ಮಿಸ್ ಆಗಿದೆ. ಅಕುಲ್ ಬಾಲಾಜಿಯ ಜೂನಿಯರ್ ವರ್ಷನ್ನಂತೆ ಕಾಣುವ ವಿಷ್ಣು ಜತೆಗೆ ಜೀವನ್ ಚೊಚ್ಚಲ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಅವರು ಸೇರಿ ನಾಯಕಿಯರಿಗೂ ಇನ್ನಷ್ಟು ತಯಾರಿ ಬೇಕಿತ್ತು ಅಂತನ್ನಿಸುತ್ತದೆ. ರವಿ ಕಾಳೆ, ತಬಲಾ ನಾಣಿ, ಡಿಂಗ್ರಿ ನಾಗರಾಜ್, ಲಯ ಕೋಕಿಲ ಅಲ್ಲಲ್ಲಿ ನಗಿಸುತ್ತಾರೆ.

