ಮಾಸ್ ಎಲಿಮೆಂಟ್ ಜತೆಗೆ ಸ್ನೇಹ, ಪ್ರೀತಿ, ತಂದೆ-ಮಗನ ಬಾಂಧವ್ಯಗಳ ಮೂಲಕ ನಿರ್ದೇಶಕ ಚೇತನ್ ಕಥೆ ನಿರೂಪಿಸಿದ್ದಾರೆ. ಅಮೂಲ್ ಬೇಬಿಯಂತ ಹುಡುಗನ ಪ್ರೀತಿ, ಬಳಿಕ ದ್ವೇಷ, ಪ್ರತೀಕಾರ ಕೊನೆಗೆ ಕಾಡುವ ಪಶ್ಚತ್ತಾಪವನ್ನು ನಾನ್ ಲೀನಿಯರ್ ಆಗಿ ಹೇಳಿದ್ದಾರೆ. ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೆ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ಪ್ರತೀಕಾರಕ್ಕೆ ಮುಂದಾದಾಗ ತಂದೆ-ಮಗನ ಬಾಂಧವ್ಯ ವಿಚಾರ ಮುನ್ನೆಲೆಗೆ ತಂದಿದ್ದು, ಮೊದಲಿದ್ದ ದ್ವೇಷದ ಬಿಸಿ ಆರುತ್ತದೆ. ಅಲ್ಲಿ ರಿವೇಂಜ್‌ಗೆ ಗಮನಹರಿಸಿದ್ದರೆ ಚೇತನ್ ಫುಲ್ ಮಾರ್ಕ್ಸ್ ಪಡೆಯುತ್ತಿದ್ದರು. ಸೂರ್ಯ ಪ್ರಖ್ಯಾತ್ ಮಾಸ್ ಆಗಿ ಗಮನ ಸೆಳೆಯುತ್ತಾರೆ. ಭಾವನಾ ಅಚ್ಚುಕಟ್ಟಾಗಿ ನಟಿಸಿದ್ದಾರೆ. ರಂಗಾಯಣ ರಘು, ಥ್ರಿಲ್ಲರ್ ಮಂಜು ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಮುಖ ವಿಲನ್ ಪಾತ್ರ ಸೇರಿ ಹಲವರು ಹೊಸಬರಿದ್ದು ಎಲ್ಲರೂ ಇಷ್ಟವಾಗುತ್ತಾರೆ.