ಮತ್ತೆ ಬಾಲಿವುಡ್‌ನತ್ತ ಇಂದ್ರಜಿತ್ : ದೇಶಭಕ್ತಿ ಸಾರುವ ಹಿಂದಿಯ ‘ಜೈ ಹಿಂದ್ ಜೈ ಸಿಂಧ್’ ಚಿತ್ರಕ್ಕೆ ಆ್ಯಕ್ಷನ್-ಕಟ್

ಜೈ ಹಿಂದ್ ಜೈ ಸಿಂಧ್​ ಪೋಸ್ಟರ್​
ಜೈ ಹಿಂದ್ ಜೈ ಸಿಂಧ್​ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಐದು ವರ್ಷಗಳ ಬಳಿಕ ಮತ್ತೆ ಹಿಂದಿ ಚಿತ್ರರಂಗಕ್ಕೆ
  • ದೇಶಪ್ರೇಮ ಸಾರುವ ಜೈ ಹಿಂದ್​ ಜೈ ಸಿಂಧ್​ ಸಿನಿಮಾ ಘೋಷಣೆ
  • ಬಹುತೇಕ ಚಿತ್ರೀಕರಣ ಪೂರ್ಣ, ಇದೇ ವರ್ಷ ತೆರೆಗೆ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಲವು ನಿರ್ದೇಶಕರು ಬಾಲಿವುಡ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಎ. ಹರ್ಷ, ರವಿವರ್ಮಾ, ಪವನ್ ಒಡೆಯರ್, ನಂದಕಿಶೋರ್, ರಾಮ್‌ರೆಡ್ಡಿ ಹೀಗೆ ಪಟ್ಟಿ ಸಾಗುತ್ತದೆ. ಇವರ ಜತೆಗೆ ಕನ್ನಡದ ‘ಲಂಕೇಶ್ ಪತ್ರಿಕೆ’ ‘ಮೊನಾಲಿಸಾ’, ‘ಐಶ್ವರ್ಯ’ ಖ್ಯಾತಿಯ ಇಂದ್ರಜಿತ್ ಲಂಕೇಶ್ ಕೂಡ ಈ ಹಿಂದೆ ಹಿಂದಿ ಸಿನಿಮಾ ನಿರ್ದೇಶಿಸಿದ್ದರು. 2020ರಲ್ಲಿ ತೆರೆಕಂಡಿದ್ದ ಪಂಕಜ್ ತ್ರಿಪಾಠಿ ಅಭಿನಯದ ‘ಶಕೀಲಾ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದ್ದರು. ಈ ಚಿತ್ರ ತೆರೆಕಂಡು ಐದು ವರ್ಷಗಳ ನಂತರ ಮತ್ತೆ ಇಂದ್ರಜಿತ್ ಹಿಂದಿ ಸಿನಿಮಾ ನಿರ್ದೇಶನಕ್ಕೆ ಮುಂದಾಗುತ್ತಿದ್ದು, ಇತ್ತೀಚೆಗೆ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ‘ಜೈ ಹಿಂದ್, ಜೈ ಸಿಂಧ್’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಇದು ಅವರು ನಿರ್ದೇಶಿಸುತ್ತಿರುವ ಹಿಂದಿಯ ಎರಡನೇ ಚಿತ್ರ. ದೇಶಭಕ್ತಿ ಹಾಗೂ ಪ್ರೀತಿ ಕಥಾ ಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದಾ, ಉಪಸನಾ ಸಿಂಗ್, ಅಮಿತ್ ಬಹಲ್ ತಾರಾಗಣದಲ್ಲಿದ್ದಾರೆ.
"

ಇದೊಂದು ಪ್ರೇಮಕಥೆ. ದೇಶ ವಿಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕತೆಯಲ್ಲಿ ಏಕತೆ ಎಂಬ ವಿಷಯವನ್ನು ಇಲ್ಲಿ ಹೇಳುತ್ತಿದ್ದೇವೆ. ದೇಶ ವಿಭಜನೆಯಾದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ತೊಂದರೆ ಅನುಭವಿಸಿದರು. ಆ ಸಂಕಟದಿಂದ ಹೊರಬಂದು, ಈಗ ಹೇಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂಬುದನ್ನು ತೋರಿಸಲಿದ್ದೇವೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವರ್ಷ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಾಲ್ವರು ನಟಿಯರನ್ನು ಪರಿಚಯಿಸುತ್ತಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net