ಸಿಲ್ಕ್ ಸ್ಮಿತಾ ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ರಜನಿಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್, ಅಂಬರೀಶ್, ಮೋಹನ್ ಲಾಲ್ ಅಂತಹ ಘಟಾನುಘಟಿ ನಟರ ಸಿನಿಮಾಗಳಲ್ಲೂ ಅವರಿಗಾಗಿ ಒಂದು ಪ್ರತ್ಯೇಕ ಸಾಂಗ್ ಇರಲೇಬೇಕಿತ್ತು. ಅವರ ಡೇಟ್ಗಾಗಿ ನಾಯಕರು ತುಂಬಾನೆ ಕಾಯುತ್ತಿದ್ದರು. ದಕ್ಷಿಣ ಕನ್ನಡದ ಸಿನಿಮಾಗಳಲ್ಲಿ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ 450ಕ್ಕೂ ಹೆಚ್ಚು ಸಿನಿಮಾದಲ್ಲಿ ಮಿಂಚಿದರು. ಸಿಲ್ಕ್ ಸ್ಮಿತಾರಿಗೆ ಬೇಡಿಕೆ ಎಷ್ಟಿತ್ತೆಂದರೆ 1983 ಒಂದೇ ವರ್ಷದಲ್ಲಿ 44 ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರು ಒಂದು ಹಾಡಿಗೆ ಪಡೆಯುತ್ತಿದ್ದ ಸಂಭಾವನೆ ಅಂದಿನ ನಾಯಕರಿಗಿಂತ ಹೆಚ್ಚಿತ್ತು