ಅಮ್ಮನ ನಂಬಿಕೆಯನ್ನು ಗೌರವಿಸಿದ್ದೆನೆ: ತಾಯಿಯ ಅಂತಿಮ ಸಂಸ್ಕಾರದ ಬಗ್ಗೆ ಟ್ರೋಲ್ ಮಾಡಿದವರಿಗೆ ಪ್ರಕಾಶ್ ರಾಜ್​ ತಿರುಗೇಟು| Prakash Raj

ಟ್ರೋಲ್​ಗಳಿಗೆ ಖಡಕ್​ ಉತ್ತರ ಕೊಟ್ಟ ನಟ ಪ್ರಕಾಶ್​ ರಾಜ್​
ಟ್ರೋಲ್​ಗಳಿಗೆ ಖಡಕ್​ ಉತ್ತರ ಕೊಟ್ಟ ನಟ ಪ್ರಕಾಶ್​ ರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ನಿಧನ
  • ಸುವರ್ಣಲತಾ ಅವರ ಅಂತಿಮ ವಿಧಿವಿಧಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲಿಂಗ್​
  • ಈ ಟ್ರೋಲ್​ಗಳಿಗೆ ಖಡಕ್​ ಉತ್ತರ ಕೊಟ್ಟ ನಟ ಪ್ರಕಾಶ್​ ರಾಜ್​
ವೈರಲ್​: ಕೆಲ ದಿನಗಳ ಹಿಂದೆ ಬಹುಭಾಷಾ ನಟ ಪ್ರಕಾಶ್​ ರಾಜ್​ (Prakash Raj) ಅವರ ತಾಯಿ ಸುವರ್ಣಲತಾ (86) ಅವರು ನಿಧನರಾದ ಬಗ್ಗೆ ಎಲ್ಲರಿಗೂ ತಿಳಿದಿದೆ. ತಾಯಿ ಸುವರ್ಣಲತಾ ಅವರ ಸಾವಿನ ಬಳಿಕ ಪ್ರಕಾಶ್​ ರಾಜ್​ ಕ್ರಿಶ್ಚಿಯನ್​ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಟ್ರೋರಲ್​ಗಳ ಹಾವಳಿಗೆ ಒಳಗಾಗಿದ್ದು, ಈಗ ಇದಕ್ಕೆ ಪ್ರಕಾಶ್​ ರಾಜ್​ ತಿರುಗೇಟನ್ನು ನೀಡಿದ್ದಾರೆ.

ತಾಯಿಯ ನಂಬಿಕೆಗೆ ಬೆಲೆ ನೀಡಿದ್ದೆನೆ

ಹೌದು, ನಾನು ದೇವರನ್ನು ನಂಬುವುದಿಲ್ಲ, ಆದರೆ ನನ್ನಮ್ಮ ದೇವರನ್ನು ನಂಬುತ್ತಿದ್ದಳು. ಅವಳ ನಂಬಿಕೆಯನ್ನು ಧಿಕ್ಕರಿಸಲು ನಾನ್ಯಾರು?. ಆದ್ದರಿಂದ ನಾನು ಅವಳ ನಂಬಿಕೆಯಂತೆ ಅಂತಿಮ ಸಂಸ್ಕಾರವನ್ನು ಪೂರೈಸಿದ್ದೆನೆ. ಇದು ನಾನು ಒಬ್ಬರಿಗೆ ನೀಡುವ ಕನಿಷ್ಟ ಗೌರವವಾಗಿದೆ, ನಿಮ್ಮಂಥ ದ್ವೇಷಿಸುವ ಪ್ರಾಣಿಗಳಿಗೆ ಇದು ಅರ್ಥವಾಗದು. ಎಂದು ಪ್ರಕಾಶ್​ ರಾಜ್​ ತಮ್ಮ ಎಕ್ಸ್​ (ಟ್ವಿಟರ್​) ನಲ್ಲಿ ಬರೆದುಕೊಂಡಿದ್ದಾರೆ.
ಟ್ರೋಲ್​ ಆಗಿದ್ದೇಕೆ?
ಪ್ರಕಾಶ್​ ರಾಜ್​ ಅವರು ಕೆಲ ತಿಂಗಳುಗಳ ಹಿಂದೆ ಹಿಂದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ನನಗೆ ದೇವರಲ್ಲಿ ಯಾವುದೇ ನಂಬಿಕೆಯಿಲ್ಲ, ನಾನು ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದರು.
ಈಗ ತಾಯಿಯ ಸಾವಿನ ಬಳಿಕ ಚರ್ಚನಲ್ಲಿ ಪ್ರಕಾಶ್ ರಾಜ್​ ಕುಳಿತಿರುವ ಫೋಟೊ ವೈರಲ್​ ಆಗುತ್ತಿದ್ದಂತೆ, ಟ್ರೋಲಿಂಗ್​ ಪ್ರಾರಂಭವಾಗಿದೆ.
ಇವನು ದೇವರನ್ನು ನಂಬುದಿಲ್ಲವಂತೆ, ಈಗ ಚರ್ಚ್​ನಲ್ಲಿ ಏನು ಗೆಣಸು ಕೀಳಲು ಕುಳಿತ್ತಿದ್ದಾನಾ? ಎಂದು ಒಬ್ಬರು ಹೇಳಿದ್ದರೆ, ಯಾವುದೇ ದೈವಿಕ ಆಚರಣೆಯನ್ನು ಮಾಡುವುದಿಲ್ಲ ಎಂದು ಹೇಳಿ ಈಗ ಶಾಸ್ತ್ರೋಸ್ತ್ರವಾಗಿ ತಾಯಿಯ ಅಂತಿಮ ವಿಧಿವಿಧಾನ ಮಾಡುತ್ತಿದ್ದಾನೆ ಎಂದು ಇನ್ನೊಬ್ಬರು ಟ್ರೋಲ್​ ಮಾಡಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net