ಗೆಳೆಯರಿಂದಲೇ ಸೋಲುವ, ಗೆಲ್ಲುವ ಸೋಮಾರಿ ಸೋಮನ ಕಥೆ - Chandrahasa Review

Published on: 
ಗೆಳೆಯರಿಂದಲೇ ಸೋಲುವ, ಗೆಲ್ಲುವ ಸೋಮಾರಿ ಸೋಮನ ಕಥೆ - Chandrahasa Review (3 / 5)

ಚಿತ್ರ: ಚಂದ್ರಹಾಸ

ನಿರ್ದೇಶನ: ಆನಂದ್​ ಕಲಕಬಂಡಿ

ತಾರಾಗಣ: ಹರೀಶ್​ ಹಿರಿಯೂರು, ನಿಂಗರಾಜು ಮಂಡ್ಯ, ಛಾಯಾಶ್ರೀ, ಸಂತೋಷ್​ ಕೇರಿ, ಜ್ಯೋತಿ ಮಂಗಳೂರು, ಸೂರ್ಯಕಲಾ ಮತ್ತಿತರರು

"ಸಾರ, ಸಜ್ಜನರ ಸಂಗ ಲೇಸು ಕಂಡಯ್ಯಾ, ದೂರ, ದುರ್ಜನರ ಸಂಗವದು ಭಂಗವಯ್ಯಾ' ಎಂಬ ಬಸವಣ್ಣನ ಸಾಲುಗಳ ಸಾಲಿನಲ್ಲಿ ಸಾಗುವ ಸಿನಿಮಾ "ಚಂದ್ರಹಾಸ'. ಒಬ್ಬ ವ್ಯಕ್ತಿ ಹಾಳಾಗಲು ಅಥವಾ ಉದ್ಧಾರವಾಗಲು ಆತನ ಒಬ್ಬ ಗೆಳೆಯ ಸಾಕು ಎಂಬುದನ್ನು ಈ ಸಿನಿಮಾ ಮೂಲಕ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ನಿರ್ದೇಶಕ ಆನಂದ್​ ಕಲಕಬಂಡಿ.

ಚಂದ್ರಹಾಸ ಪೋಸ್ಟರ್
ಚಂದ್ರಹಾಸ ಪೋಸ್ಟರ್

ಆತ ಸೋಮ (ಹರೀಶ್​). ಪ್ರತಿ ವರ್ಷ ಯಾವುದಾದರೂ ಸ್ಪರ್ಧಾತ್ಮಕ ಪರೀೆ ಬರೆದು, ೇಲ್​ ಆಗಿ ಉಂಡಾಡಿ ಗುಂಡನಂತೆ ಓಡಾಡಿಕೊಂಡಿರುತ್ತಾನೆ. ಅಪ್ಪನಿಲ್ಲದ ಆತನಿಗೆ ಅಮ್ಮನೇ (ಜ್ಯೋತಿ) ಎಲ್ಲ. ಜತೆಗೆ ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು, ಬದುಕಿಗಾಗಿ ಸೆರಗು ಚೆಲ್ಲುವ ಅಕ್ಕ (ಸೂರ್ಯಕಲಾ)... ಹೀಗಿದ್ದರೂ ಜವಾಬ್ದಾರಿಯಿಲ್ಲದ ಫಟಿಂಗ ಸೋಮ. ಆತನ ಪ್ರಾಣದ ಗೆಳೆಯ ಚಂದ್ರ (ನಿಂಗರಾಜು) ಹೋಟೆಲ್​ ನಡೆಸುತ್ತಿರುತ್ತಾನೆ. ಮಗನಿಗೆ ಮದುವೆ ಮಾಡಿಸಿದರೆ ಜವಾಬ್ದಾರಿ ಬರುತ್ತದೆ ಎಂಬ ನಿರೀಕ್ಷೆ ಅಮ್ಮನದು. ಆದರೆ, ಕೆಲಸವಿಲ್ಲದ ಹುಡುಗನಿಗೆ ಹುಡುಗಿ ಯಾರು ಕೊಟ್ಟಾರು? ಅಣ್ಣನ ಮಗಳು ಶ್ರೀದೇವಿ (ಛಾಯಾಶ್ರೀ) ಸೊಸೆಯಾಗಿ ಮನೆ ಸೇರುತ್ತಾಳೆ. ಆದರೂ, ಹೆಂಡತಿ ಮನೆಯ ಕಾರ್ಯಕ್ರಮಕ್ಕೆ ಚಿನ್ನ ಕೊಡಿಸಲು ಅಕ್ಕನ ಬಳಿ ಸಾಲ ಕೇಳುವ ದುಸ್ಥಿತಿ ಸೋಮಾರಿ ಸೋಮನದು. ಕ್ರಮೇಣ ಈ ಜೋಡಿ ಮುದ್ದಾದ ಮಗು ಜನಿಸುತ್ತದೆ. ಬಳಿಕ ಸೋಮನಿಗೆ ಜವಾಬ್ದಾರಿಯೂ ಬರುತ್ತದೆ. ರಸ್ತೆಬದಿ ಮೊಬೈಲ್​ ಕವರ್​, ಹೆಡ್​ಫೋನ್ ಮಾರಾಟ ಮಾಡತೊಡಗುತ್ತಾನೆ. ಹಾಗೂ ಹೀಗೂ ಜೀವನ ನಡೆಯುತ್ತಿರುತ್ತದೆ. ಕೆಲಸವಿಲ್ಲದ ಸಮಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಜಾಲಿಯಾಗಿ ಓಡಾಡಿಕೊಂಡಿದ್ದ ಸೋಮನಿಗೆ, ಕೆಲಸ ಮಾಡಲು ಪ್ರಾರಂಭಿಸಿದ ಬಳಿಕ ಹಲವು ಸಂಕಷ್ಟಗಳು ಎದುರಾಗುತ್ತವೆ. ಹಾಗಾದರೆ ಸೋಮನ ಸಮಸ್ಯೆಗಳೇನು? ಅದಕ್ಕೆ ಕಾರಣವೇನು? ಆತನ ಸಮಸ್ಯೆಗೂ ಗೆಳೆಯರಿಗೂ ಏನು ಸಂಬಂಧ? ಅವುಗಳಿಂದ ಸೋಮ ಹೇಗೆ ಪಾರಾಗುತ್ತಾನೆ? "ಚಂದ್ರಹಾಸ' ನೋಡಿ.

ಚಂದ್ರಹಾಸ ಚಿತ್ರದಲ್ಲಿ ಹರೀಶ್ ಹಿರಿಯೂರು ಮತ್ತು ಛಾಯಾಶ್ರೀ ಉಮೇಶ್
ಚಂದ್ರಹಾಸ ಚಿತ್ರದಲ್ಲಿ ಹರೀಶ್ ಹಿರಿಯೂರು ಮತ್ತು ಛಾಯಾಶ್ರೀ ಉಮೇಶ್

ಯಲಬುರ್ಗದ ಹಿನ್ನೆಲೆಯಲ್ಲಿ ಸಾಗುವ ಈ ಕಥೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಕನೆಕ್ಟ್​ ಆಗುತ್ತದೆ. ಉತ್ತರ ಕರ್ನಾಟಕದ ಜವಾರಿ ಹಾಸ್ಯದ ಜತೆಗೆ ಗಂಭೀರ ವಿಷಯಗಳನ್ನು ಅಚ್ಚುಕಟ್ಟಾಗಿ ದಾಟಿಸಿದ್ದಾರೆ ನಿರ್ದೇಶಕ ಆನಂದ್​. ಹರೀಶ್​, ಜ್ಯೋತಿ ಮತ್ತು ಸೂರ್ಯಕಲಾ ನೈಜ ನಟನೆಯ ಮೂಲಕ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಛಾಯಾಶ್ರೀ, ನಿಂಗರಾಜು, ಸಂತೋಷ್​ ಸೇರಿ ಉಳಿದ ಪಾತ್ರಗಳು ಅಚ್ಚುಕಟ್ಟಾಗಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತದಲ್ಲಿ ಹಾಡುಗಳು ಕೇಳುವಂತಿವೆ.