ಅಬ್ಬಬ್ಬಾ! ಯಶ್​ 'ಟಾಕ್ಸಿಕ್'​ ಚಿತ್ರದ ರನ್​ಟೈಮ್​ ಎಷ್ಟಿದೆ ಗೊತ್ತಾ? ಪೈಪೋಟಿಯಲ್ಲಿ ರಣವೀರ್ 'ಧುರಂಧರ್​ 2'... | Toxic Runtime

ಯಶ್​ ಅಭಿನಯದ 'ಟಾಕ್ಸಿಕ್​'
ಯಶ್​ ಅಭಿನಯದ 'ಟಾಕ್ಸಿಕ್​'
Published on

ಪ್ರಮುಖ ಮುಖ್ಯಾಂಶಗಳು

  • ಮಾ.19ಕ್ಕೆ ಯಶ್​ 'ಟಾಕ್ಸಿಕ್'​ ತೆರೆಗೆ ಬರಲು ಸಿದ್ಧ
  • ಈಗಾಗಲೇ ಮೊದಲ ಟೀಸರ್​ ಭಾರೀ ವಿವಾದ, ಟೀಕೆಗಳಿಗೆ ಗುರಿ
  • ರಕ್ತಸಿಕ್ತ ದೃಶ್ಯಗಳು, ರಾಕಿಂಗ್ ಸ್ಟಾರ್ ಯಶ್​ ದ್ವಿಪಾತ್ರ!
  • ಟಾಕ್ಸಿಕ್​ ರನ್​ಟೈಮ್​ ಕೇಳಿದ್ರೆ ಇಷ್ಟೊಂದಾ ಅಂತೀರಾ...
ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್,​ ನಟ ಯಶ್ ಅಭಿನಯದ ಹಾಗೂ ಮಾಲಿವುಡ್​ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಬಲು ಜೋರಾಗಿದೆ. ಈಗಾಗಲೇ ಸಿನಿಮಾದ ಮೊದಲು ಮತ್ತು ಎರಡನೇ ಟೀಸರ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುವುದರ ಜತೆಗೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿವೆ. ಈ ಮಧ್ಯೆ, ಚಿತ್ರದ ಒಂದು ಹಾಡು ಇದೇ ಮಾ.02ರಂದು ರಿಲೀಸ್​ ಆಗಲಿದ್ದು, ಸಿನಿಮಾದ ಒಟ್ಟು ರನ್​ಟೈಮ್ ಎಷ್ಟು ಎಂಬುದರ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.
ಇದೇ ಮಾರ್ಚ್​ 19ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ಸಜ್ಜಾಗಿರುವ ಟಾಕ್ಸಿಕ್​, ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲು ಎದುರುನೋಡುತ್ತಿದೆ. ಮತ್ತೊಂದೆಡೆ, ಇದೇ ದಿನದಂದು ರಣವೀರ್ ಸಿಂಗ್ ಅಭಿನಯದ ಬ್ಲಾಕ್​ಬಸ್ಟರ್​ 'ಧುರಂಧರ್​' ಸಿನಿಮಾ ಸೀಕ್ವೆಲ್​ ಕೂಡ ಬಿಡುಗಡೆಯಾಗುತ್ತಿದೆ. ಇದು ಜಾಗತಿಕ ಹಾಗೂ ದೇಶಿಯ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿಗೆ ಸಾಕ್ಷಿಯಾಗಲಿದೆ.

ಇಷ್ಟೊತ್ತು ಕುಳಿತು ನೋಡಬೇಕಾ?

'ಗುಲ್ಟೇ' ಸಿನಿ ವರದಿ ಪ್ರಕಾರ, ಯಶ್​ ಅವರ ಟಾಕ್ಸಿಕ್​ ಚಿತ್ರದ ರನ್​ಟೈಮ್​ ಬರೋಬ್ಬರಿ 3 ಗಂಟೆ 15 ನಿಮಿಷವಿದೆ. ಅಮೆರಿಕನ್​ ಶೋಗಳನ್ನು ಗಮನದಲ್ಲಿಟ್ಟುಕೊಂಡು ಇಷ್ಟು ಗಂಟೆಗಳ ಕಾಲ ಸಿನಿಮಾವನ್ನು ತಯಾರಿಸಲಾಗಿದೆ. ಮತ್ತೊಂದೆಡೆ, 'ಧುರಂಧರ್​ 2: ದಿ ರಿವೆಂಜ್​' ಚಿತ್ರವು 3 ಗಂಟೆ 40 ನಿಮಿಷಗಳ ಲೆಂಥಿ ರನ್​ಟೈಮ್​ ಹೊಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.

'ಟಾಕ್ಸಿಕ್' ವಿವಾದ​

'ಕೆಜಿಎಫ್'​ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ನಟ ರಾಕಿಂಗ್​ ಸ್ಟಾರ್​ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್​' ಚಿತ್ರದ ಮೊದಲ ಟೀಸರ್​ ರಿಲೀಸ್ ಆಯಿತು. ಟೀಸರ್​ನ ಆರಂಭದಲ್ಲಿ ಮೂಡಿಬಂದ ಹಸಿಬಿಸಿ ದೃಶ್ಯವಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಕಾನೂನು ದೂರುಗಳಿಗೂ ಕಾರಣವಾಯಿತು. ಸಿನಿಮಾದ ನಿರ್ದೇಶಕಿ ವಿರುದ್ಧ ತೀವ್ರ ಟೀಕೆಗಳು ಹರಿದುಬಂದಿತು. ಈಗ ಎರಡನೇ ಟೀಸರ್​ ಯಶ್​ ಪಾತ್ರದ ಮೇಲೆ ಭಾರೀ ಕುತೂಹಲವನ್ನು ಕೆರಳಿಸಿದೆ. ಕಾರಣ, ಇದರಲ್ಲಿ ತೋರಿಸಲಾದ ಸ್ಟಾರ್​ ನಟನ ದ್ವಿಪಾತ್ರ.

ಮಾ.19 ಡ್ಯಾಡಿ ಕಮ್ಸ್​ ಹೋಮ್​

2026ರ ಮಾರ್ಚ್ 19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ಗೆ ಸಜ್ಜಾಗಿರುವ 'ಟಾಕ್ಸಿಕ್'​ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಶ್​, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್​, ಅಕ್ಷಯ್​ ಓಬ್​ರಾಯ್​ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net