ಟಾಕ್ಸಿಕ್ ಚಿತ್ರಕ್ಕೆ ಆರ್​ಜಿವಿ ಶಾಕ್: ಧುರಂಧರ್ 2 ಹೊಗಳುತ್ತಾ ಯಶ್ ಸಿನಿಮಾ ಕಾಲೆಳೆದ್ರಾ ವರ್ಮಾ? Ram Gopal Varma

Ram Gopal Varma (ಚಿತ್ರ Instagram)
Ram Gopal Varma (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • 2026 ನೇ ಸಾಲಿನ ಬಾಲಿವುಡ್​ನಲ್ಲಿ ತೆರೆ ಕಾಣಲಿವೆ ಧುರಂಧರ್ 2, ದಿ ರಿವೆಂಜ್ ಮತ್ತು ಟಾಕ್ಸಿಕ್!
  • ಧುರಂಧರ್ 2 ಟೀಸರ್​ ಬಗ್ಗೆ ಹೊಗಳಿದರೆ, ಟಾಕಿಕ್ಸ್​ಗೆ ಕಷ್ಟವಾಗಬಹುದು ಎಂದಿದ್ದೇಕೆ ರಾಮ್ ಗೋಪಾಲ್ ವರ್ಮಾ
  • ಧುರಂಧರ್ ಮುಂದೆ ಬರುವವರ ಬಗ್ಗೆ ನನಗೆ ವಿಷಾದವಿದೆ! ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರಾ ವರ್ಮಾ
Ram Gopal Varma: 2026 ನೇ ಸಾಲಿನ ಬಾಲಿವುಡ್​ನಲ್ಲಿ ತೆರೆ ಕಾಣಲಿರುವ ಎರಡು ದೈತ್ಯ ಚಿತ್ರಗಳಾದ ಧುರಂಧರ್ 2: ದಿ ರಿವೆಂಜ್ ಮತ್ತು ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಗ್ಗೆ ಹಿರಿಯ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಣವೀರ್ ಸಿಂಗ್ ಅವರ ಧುರಂಧರ್​ 2 ಚಿತ್ರದ ಟೀಸರ್​ ಮಂಗಳವಾರ (ಫೆ.03) ರಂದು ಬಿಡುಗಡೆಯಾದ ನಂತರ, ರಾಮ್​ ಗೋಪಾಲ್​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಟೀಸರ್​ ಬಗ್ಗೆ ಹೊಗಳಿದರೆ, ಟಾಕಿಕ್ಸ್​ಗೆ ಕಷ್ಟವಾಗಬಹುದು ಎಂದು ಹೇಳಿಕೆ ನೀಡಿದ್ದು, ಇದು ಯಶ್​ ಅವರ ಟಾಕ್ಸಿಕ್​ ಚಿತ್ರದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡುತ್ತಿರುವುದಾಗಿ ಕಂಡುಬಂದಿದೆ.

ಪೋಸ್ಟ್​ನಲ್ಲೇನಿದೆ?

ವರ್ಮಾ, ಧುರಂಧರ್ 2 ಟೀಸರ್ ಅನ್ನು ಮರು ಪೋಸ್ಟ್ ಮಾಡಿ, "ಇದು ರಿವೇಂಜ್​ ಅಲ್ಲ, ಇದು ಆದಿತ್ಯ ಧರ್ ಅವರ RAMPAGE. ಇದರ ಹಾದಿಯಲ್ಲಿ ಅಡ್ಡ ಬರುವ ಚಿತ್ರಗಳ ಬಗ್ಗೆ ನನಗೆ ವಿಷಾದವಿದೆ.. RIP (ಆತ್ಮಕ್ಕೆ ಶಾಂತಿ ಸಿಗಲಿ) ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ಅವರು ಟಾಕ್ಸಿಕ್ ಚಿತ್ರದ ಹೆಸರನ್ನು ಹೇಳದಿದ್ದರೂ, ಅವರ ಪ್ರತಿಕ್ರಿಯೆ ಯಶ್ ಅವರ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್​ ಬಗ್ಗೆಯೇ ಆಗಿರಬಹುದು ಎಂಬ ಕುತೂಹಲ ಹುಟ್ಟುಹಾಕಿದೆ. ಆದಾಗ್ಯೂ, ಈ ಚಿತ್ರವೂ ಕೂಡಾ ಧುರಂಧರ್ 2 ರಂತೆಯೇ ಮಾರ್ಚ್ 19, 2026 ರಂದು ಬಿಡುಗಡೆಯಾಗಲಿದ್ದು, ಟಾಕ್ಸಿಕ್ ಉದ್ದೇಶಿಸಿ ಆಡಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ನೆಟ್ಟಿಗರು ವರ್ಮಾ ಪರೋಕ್ಷವಾಗಿ ಟಾಕ್ಸಿಕ್ ಟೀಸರ್ ಮತ್ತು ಧುರಂಧರ್ 2 ರೊಂದಿಗೆ ಸ್ಪರ್ಧಿಸುವ ಸಾಮರ್ಥ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ ಬರೆದಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು "ನೇರವಾಗಿ ಬರೆಯಿರಿ... RIP ಟಾಕ್ಸಿಕ್" ಎಂದು ಕಾಮೆಂಟ್​ ಮಾಡಿದ್ದಾರೆ.
ಎರಡು ಚಿತ್ರಗಳ ನಡುವಿನ ಘರ್ಷಣೆಯ ಬಗ್ಗೆ ವರ್ಮಾ ಸಾರ್ವಜನಿಕವಾಗಿ ಚರ್ಚಿಸುತ್ತಿರುವುದು ಇದೇನು ಮೊದಲಲ್ಲ. ಅವರು ಹಿಂದಿನ ಹೇಳಿಕೆಗಳು ಹೆಡ್-ಟು-ಹೆಡ್ ಬಿಡುಗಡೆಯ ಶೈಲಿಯನ್ನು ನೆಲಮಟ್ಟದ ಆಕ್ಷನ್​ ಸಿನಿಮಾ ನಡುವಿನ ಸಾಂಕೇತಿಕ ಯುದ್ಧ ಎಂದು ರೂಪಿಸಿ, ಡ್ರುರಾಕ್ಸಿಕ್ ಎಂದು ಕರೆದಿದ್ದರು.
2025ರಲ್ಲಿ ತೆರೆಕಂಡು ಸಿನಿರಂಗದಲ್ಲಿ ಸಂಚಲನ ಮೂಡಿಸಿದ್ದ 'ಧುರಂಧರ್: ದಿ ರಿವೆಂಜ್' ಚಿತ್ರದ ಮುಂದುವರಿದ ಭಾಗವಾಗಿ 'ಧುರಂಧರ್ 2' ಸಿದ್ಧವಾಗುತ್ತಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತೊಮ್ಮೆ ತಮ್ಮ ಹಳೆಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.
ಇನ್ನೊಂದೆಡೆ, ಕೆಜಿಎಫ್ ನಂತರ ಯಶ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಯಶ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ನಯನತಾರಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net