ನಿರ್ದೇಶಕ ಎಂಜಿಆರ್ ಪ್ರೇಕ್ಷಕರಿಗೆ ಬೋರ್ ಆಗದಂತೆ ಕಥೆ ಕಟ್ಟಿಕೊಟ್ಟಿದ್ದಾರೆ. ಕನ್ನಡದ ಹುಡುಗ ಧರ್ಮ ಕೀರ್ತಿರಾಜ್ ಮೊದಲ ಬಾರಿ ಟಾಲಿವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡಿರುವ ಕಾರಣ ಅವರ ಅಭಿಮಾನಿಗಳಿಗೆ ವಿಶೇಷ ಸಿನಿಮಾ. ಜತೆಗೆ ಅವರಿಲ್ಲಿ ಖಡಕ ಪೊಲೀಸ್ ಅಧಿಕಾರಿಯಾಗಿ ಮಾಸ್ ಲುಕ್ನಲ್ಲಿ ಮಿಂಚಿದ್ದಾರೆ. ಅಧಿರಾ ಎಂಬ ಗಂಭೀರ್ ಸಿಬಿಐ ಆಫೀಸರ್ ಪಾತ್ರದಲ್ಲಿ ಗ್ಲಾಮರಸ್ ಅಪ್ಸರಾ ರಾಣಿ ಕೂಡ ಆ್ಯಕ್ಷನ್ ಮಾಡಿದ್ದಾರೆ. ಇವರೊಂದಿಗೆ ಕ್ರಾಂತಿ ಕಿಲ್ಲಿ, ಹಿರಿಯ ನಟ ಸುಮನ್, ಘರ್ಷಣಾ ಶ್ರೀನಿವಾಸ್, ಟಾರ್ಜನ್, ರಾಜೇಂದ್ರ, ಜ್ಯೂ. ರೇಲಂಗಿ, ಜಗದೀಶ್ವರಿ, ಮಣಿಕುಮಾರ್, ಧ್ರುವ, ಅನಿಲ್, ಪ್ರಗ್ಯಾ, ನವಿತಾ, ವೈಷ್ಣವಿ, ಜಬರ್‌ದಸ್ತ್ ಜಿಎಂಆರ್, ಜಬರ್‌ದಸ್ತ್ ಬಾಬು, ಜಬರ್‌ದಸ್ತ್ ರಾಮು, ಈಟಿವಿ ಜೀವನ್, ಮಮತಾರೆಡ್ಡಿ ಮುಂತಾದವರು ತಮಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.