ಜೈಲಲ್ಲಿ DBoss ಬರ್ತ್‌ಡೇ: ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

DBoss
DBoss
Published on

ಬೆಂಗಳೂರು:ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ(DBoss)ಇಂದು(ಫೆ.16) ತಮ್ಮ 49ನೇಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಆದರೆ ಪ್ರತಿವರ್ಷದಂತೆ ಬಾರಿ ಅವರಮನೆಯ ಮುಂದೆ ಹಬ್ಬದ ವಾತಾವರಣವಿಲ್ಲ. ಕೊಲೆ ಆರೋಪದ ಮೇಲೆಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟದರ್ಶನ್, ಇದೇ ಮೊದಲ ಬಾರಿಗೆಜೈಲಿನ ನಾಲ್ಕು ಗೋಡೆಗಳ ಮಧ್ಯೆ ತಮ್ಮ ಹುಟ್ಟುಹಬ್ಬವನ್ನು ಕಳೆಯುವಂತಾಗಿದೆ.

ಜೈಲಿನಲ್ಲಿಹುಟ್ಟುಹಬ್ಬ

ಸಾಮಾನ್ಯವಾಗಿದರ್ಶನ್ ಹುಟ್ಟುಹಬ್ಬ ಬಂತೆಂದರೆ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸ ಮುಂಭಾಗಸಾವಿರಾರು ಅಭಿಮಾನಿಗಳು ನೆರೆಯುತ್ತಿದ್ದರು. ಕೇಕ್ ಕತ್ತರಿಸುವುದು, ಹೂವಿನಹಾರಗಳು ಮತ್ತು ಪಟಾಕಿಗಳ ಸದ್ದಿನಿಂದ ಇಡೀ ಏರಿಯಾ ಸಂಭ್ರಮದಿಂದಕೂಡಿರುತ್ತಿತ್ತು. ಆದರೆ ಬಾರಿಅಲ್ಲಿ ನೀರವ ಮೌನ ಆವರಿಸಿದೆ.ಕಳೆದ ವರ್ಷವಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ದರ್ಶನ್,ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಮತ್ತುಆಪ್ತ ಸ್ನೇಹಿತರ ಜೊತೆ ಸಂಭ್ರಮದಿಂದ ಜನ್ಮದಿನಆಚರಿಸಿಕೊಂಡಿದ್ದರು. ಆದರೆ ವಿಧಿಯಾಟ ಎನ್ನುವಂತೆ ಬಾರಿ ಅವರ ಜನ್ಮದಿನಜೈಲಿನಲ್ಲೇ ಕಳೆದಿದೆ.

ಪತ್ನಿವಿಜಯಲಕ್ಷ್ಮಿ ಭಾವುಕ ಹಾರೈಕೆ

ತಮ್ಮಪತಿಯ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿಹಳೆಯ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.ದರ್ಶನ್ ಕೇಕ್ ಕಟ್ ಮಾಡುತ್ತಿರುವಹಳೆಯ ಸುಂದರ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, ಸಾಲುಗಳಲ್ಲಿ ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ.

"ದರ್ಶನ್ಅವರಿಗೆ ಪ್ರತಿ ದಿನವೂ ಹುಟ್ಟುಹಬ್ಬವೇ... ಅವರಿಗೆ ಜನ್ಮದಿನದ ಶುಭಾಶಯಗಳು," ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.ಕಷ್ಟದ ಸಮಯದಲ್ಲಿ ಪತಿಯ ಪರವಾಗಿ ನಿಂತಿರುವವಿಜಯಲಕ್ಷ್ಮಿ ಅವರ ಪೋಸ್ಟ್ಈಗ ಡಿ-ಬಾಸ್ ಅಭಿಮಾನಿಗಳನಡುವೆ ವೈರಲ್ ಆಗುತ್ತಿದೆ.‌

ಅಭಿಮಾನಿಗಳನಿರಾಸೆ

ದರ್ಶನ್ಜೈಲಿನಲ್ಲಿರುವುದರಿಂದ ಅವರ ಸಾವಿರಾರು ಅಭಿಮಾನಿಗಳಿಗೆ ಬಾರಿ ನಿರಾಸೆಯಾಗಿದೆ. ಆದರೂಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರ ಹಳೆಯ ವಿಡಿಯೋಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೆಚ್ಚಿನನಟನಿಗೆ ಶುಭ ಕೋರುತ್ತಿದ್ದಾರೆ. ದರ್ಶನ್ ಸಂಕಷ್ಟದಿಂದ ಶೀಘ್ರವೇ ಹೊರಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net