'ಕೂರ್ಗಿನ ಹೆಣ್ಮಕ್ಕಳು ಅಪ್ರತಿಮ ಸುಂದರಿಯರು'; ವಿಜಯ್ ದೇವರಕೊಂಡ​ ಮಾತಿಗೆ ಸ್ಟೇಜ್​ ಮೇಲೆಯೇ ನಾಚಿ ನೀರಾದ ರಶ್ಮಿಕಾ ಮಂದಣ್ಣ..Rashmika Mandanna

Rashmika Mandanna
Rashmika Mandanna
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗಿನಲ್ಲಿ ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ ರಿಸಪ್ಶನ್
  • ಕೊಡವ ಶೈಲಿಯಲ್ಲಿ ಸೀರೆ ಉಟ್ಟು ಮಿಂಚಿದ ರಶ್ಮಿಕಾ ಮಂದಣ್ಣ
  • ನನಗೆ ಕೂರ್ಗ್ ತುಂಬಾ ಇಷ್ಟದ ಸ್ಥಳ ಎಂದ ವಿಜಯ್​ ದೇವರಕೊಂಡ
Rashmika Mandanna Coorg: ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳಾಗಿದೆ.  ಮದುವೆಯಾದ ನಂತರ ಮೊದಲ ಬಾರಿಗೆ ಅವರ ಹುಟ್ಟೂರಾದ ಕೊಡಗಿನ ವಿರಾಜಪೇಟೆಗೆ ತಮ್ಮ ಹುಟ್ಟುಹಬ್ಬದ ದಿನ ಭೇಟಿ ನೀಡಿ, ಕೊಡವ ಸಂಪ್ರದಾಯದಂತೆ ರಿಸಪ್ಶನ್ ಮಾಡಿಕೊಂಡಿದ್ದಾರೆ. ಇಲ್ಲಿ ವಿಜಯ್​ ದೇವರಕೊಂಡ ಅವರು ಪತ್ನಿ ಮತ್ತು ಕೊಡಗಿನ ವಾತಾವರಣ ಕುರಿತು ಮಾತನಾಡಿರುವುದು ಮತ್ತಷ್ಟು ಅವರ ಮೇಲಿನ ಅಭಿಮಾನವನ್ನು ಹೆಚ್ಚಿಸಿದೆ.
ಏಪ್ರಿಲ್​.5ರಂದು ರಶ್ಮಿಕಾರ ಹುಟ್ಟುಹಬ್ಬವಿತ್ತು. ಏಪ್ರಿಲ್​ 6ರಂದು ಕೊಡಗಿನ ವಿರಾಜ್​ ಪೇಟೆಯ ಸೆರನಿಟಿ ಹಾಲ್​ನಲ್ಲಿ ಡಿನ್ನರ್​ ಪಾರ್ಟಿ ಏರ್ಪಡಿಸಲಾಗಿತ್ತು. ಆರಕ್ಷತೆ ಖಾಸಗಿಯಾಗಿದ್ದ ಕಾರಣ, ಇಬ್ಬರ ಕುಟುಂಬಸ್ಥರು ಮಾತ್ರ ಭೇಟಿ ನೀಡಿದ್ದರು. ರಿಸಪ್ಶನ್​ಗೆ ರಶ್ಮಿಕಾ ಮಂದಣ್ಣ ಕೊಡವ ಶೈಲಿಯಲ್ಲಿ ಆಭರಣ ತೊಟ್ಟು ಸೀರೆ ಉಟ್ಟಿದ್ದರು. ವಿಜಯ್​ ಅವರು ಕಪ್ಪು ಬಣ್ಣದ ಸೂಟ್​ ಧರಿಸಿ ಗಮನ ಸೆಳೆದರು. ಸದ್ಯ ಇಬ್ಬರು ಫ್ಯಾನ್ಸ್ ಪಾಲಿಗೆ ಕ್ಯೂಟ್​ ಕಪಲ್ಸ್​ ಆಗಿದ್ದಾರೆ.

ನಂಗೆ ಕೂರ್ಗ ತುಂಬಾನೆ ಇಷ್ಟ

ರಿಸಪ್ಶನ್​ನಲ್ಲಿ ವಿಜಯ್​ ಮಾತನಾಡಿದ್ದಿಷ್ಟು, "ರಶ್ಮಿಕಾ ಮಂದಣ್ಣ ಪರಿಚಯವಾಗುವ ಮೊದಲೇ ಕೊಡಗಿಗೆ ಬಂದಿದ್ದೆ. ಆಗ ರಶ್ಮಿಕಾಳ ಸ್ನೇಹಿತೆಯ ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಆಕೆ ರಶ್ಮಿಕಾ ಸ್ನೇಹಿತೆ ಎಂದು ತಿಳಿದಿದ್ದು, ಇವರು ಪರಿಚಯವಾದ ಮೇಲೆ. ಇಲ್ಲಿಗೆ  ನಾನು ಒಟ್ಟು ಮೂರು ಬಾರಿಗೆ  ಭೇಟಿ ನೀಡಿದ್ದೇನೆ" ಎಂದು ಹೇಳಿದರು. 
"ಮುಂದಿನ ಬಾರಿ ನಾನು ಕೊಡಗಿಗೆ ಬಂದರೆ, ರಶ್ಮಿಕಾಳ ಬಾಲ್ಯ ಮತ್ತು ನಂತದ ಜೀವನ ಹೇಗಿತ್ತು? ಆಕೆಯ ಫೋಟೋಸ್​ ನೋಡಲು ಇಷ್ಟ ಪಡುತ್ತೇನೆ. ನಾನು ಆಕೆಯ ಬಗ್ಗೆ ತಿಳಿದುಕೊಳ್ಳುವ ಮೊದಲೇ ನಂಗೆ ಕೂರ್ಗ್​ ಇಷ್ಟವಾದ ಪ್ಲೇಸ್​. ನನಗೆ ಶಾಲಾ-ಕಾಲೇಜು ರಜೆ ಸಿಕ್ಕರೆ ಭೇಟಿ ನೀಡುತ್ತಿದ್ದ ಮೊದಲ ಸ್ಥಳ ಇದು" ಎಂದು ಹೇಳಿದರು.

ಕೂರ್ಗಿನವರು ಸುಂದರಿಯರು

"ರಶ್ಮಿಕಾ ಸಿಗುವುದಕ್ಕೂ ಮೊದಲೇ ಕೊಡಗಿನ ಹೆಣ್ಮಕ್ಕಳು ಸುಂದರಿಯರು ಎಂದು ನಾನು ಹೇಳುತ್ತಿದ್ದೆ. ನನಗೆ ಇದು ತುಂಬಾನೆ ಇಷ್ಟದ ಸ್ಥಳ. ನನ್ನ ಇಷ್ಟದ ಸ್ಥಳದ ಯುವತಿಯನ್ನೇ ಮದುವೆಯಾಗಿದ್ದೇನೆ. ಅದೇ ನನಗೆ ಖುಷಿ" ಎಂದು ಮಾತನಾಡಿದ್ದಕ್ಕೆ ಆರಕ್ಷತೆಯಲ್ಲಿ ನೆರೆದಿದ್ದ ಜನ ಭಾರಿ ಕೇಕೆ ಹಾಕಿದರು, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net