‘ಚಿರಕ್ಕಲ್ ದೇವಿ’ ಪಾತ್ರದ ಬಗ್ಗೆ ನಟಿ ಅಕ್ಷಿತಾ, ‘ನನಗೆ ಈ ಪಾತ್ರ ಸಿಕ್ಕಿರುವುದು ಅಪ್ಪನ ಆಶೀರ್ವಾದ, ದೇವಿಯ ವರ ಎಂದು ಭಾವಿಸುವೆ. ಚಿಕ್ಕಮಗಳೂರಿನ ಭಯಾನಕ ಕಾಡಿನಲ್ಲಿ ಮಧ್ಯರಾತ್ರಿ, ಬೆಳಗಿನ ಜಾವದಲ್ಲಿ ನನ್ನ ಭಾಗದ ಶೂಟಿಂಗ್ ಇರುತ್ತಿತ್ತು. ದೇವಿ ಅವತಾರ ತಾಳಿ ಶೂಟಿಂಗ್ ಮಾಡುವುದು ಒಂದು ವಿಶಿಷ್ಟ ರೋಮಾಂಚನದ ಅನುಭವ. ಡೈಲಾಗ್‌ಗಿಂತ ಆರ್ಭಟವೇ ಹೆಚ್ಚು. ಪಾತ್ರ ಒಪ್ಪಿಕೊಳ್ಳುವ ಮುನ್ನ ದೇವಿಗೆ ಪೂಜೆ ಮಾಡಿಸಿದ್ದೆ, ಹಾಗೆಯೇ, ಶೂಟಿಂಗ್ ಪೂರ್ಣವಾಗುವವರೆಗೂ ಮಾಂಸಾಹಾರ ಸೇವಿಸದೆ, ಕಠಿಣ ವ್ರತ ಕೈಗೊಂಡಿದ್ದೆ. ಕಾಡಿನಲ್ಲಿ ರಾತ್ರಿ ಹೊತ್ತು ಶೂಟಿಂಗ್ ಮಾಡುವಾಗ ಹಲವು ಬಾರಿ ಅಗೋಚರ ಅನುಭವಗಳಾಗಿದ್ದೂ ಇದೆ. ಒಂದು ರಾತ್ರಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಂದು ಶೂಟಿಂಗ್ ಸ್ಥಗಿತಗೊಳಿಸಿ, ಮರುದಿನ ಮುಂದುವರಿಸಿದೆವು. ಆರ್ಯನ್ ಸಂತೋಷ್ ನಟನೆ, ಡೈರೆಕ್ಷನ್‌ನಲ್ಲಿ ಹೆಚ್ಚು ಪರಿಶ್ರಮಪಟ್ಟಿದ್ದಾರೆ’ ಎನ್ನುತ್ತಾರೆ. ‘ಚೆಂಕೋಲ್’ ಜತೆಗೆ ಅಕ್ಷಿತಾ ‘ಧರಣಿ’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಿದ್ದು, ಅದು ಬಿಡುಗಡೆಗೆ ರೆಡಿಯಿದೆ. ‘ಓವೆಲ್ಸ್’ ಬಳಿಕ ಮತ್ತೊಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದು. ಇನ್ನಷ್ಟೇ ಆ ಚಿತ್ರದ ಘೋಷಣೆಯಾಗಬೇಕಿದೆ.