ಬೆಂಗಳೂರು ಮಾ.15 : ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ( CFCA Awards ) ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹಡೆ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮಾದ ಹಿರಿಯ ಪಿ.ಆರ್.ಓ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.