

ಮುಳಬಾಗಿಲು: ‘ಕೃಷ್ಣಂ ಪ್ರಣಯ ಸಖಿ’ ಬಳಿಕ ನಟ ಗಣೇಶ್-ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಸಿನಿಮಾ ‘ಬೃಂದಾವಿಹಾರಿ’. ಶಾಸಕ ಸಮೃದ್ಧಿ ವಿ. ಮಂಜುನಾಥ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸಾಂಗ್ಗಳ ಮೂಲಕವೇ ಈ ಚಿತ್ರ ಸದ್ದು ಮಾಡಿದೆ. ಇನ್ನು ಇದೇ 20ರಂದು ರಿಲೀಸ್ಗೆ ಸಿದ್ದವಾಗಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಳಬಾಗಿಲಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ಜತೆಗೆ ಚಿತ್ರದ ಪ್ರಿ-ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ನಟ ಶಿವರಾಜಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. ಮುಳಬಾಗಿಲಿನ ಒಡನಾಟ ನೆನಪಿಸಿಕೊಂಡ ಶಿವಣ್ಣ, ‘ಇಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನ ನಮ್ಮ ತಂದೆ ಅವರಿಗೆ ಅಂತ್ಯಂತ ಪ್ರಿಯವಾದ ಸ್ಥಳವಾಗಿತ್ತು. ಚೆನ್ನೈನಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಇಲ್ಲಿನ ದೋಸೆ ಸವಿಯುತ್ತಿದ್ದರು’ ಎಂದು ಸ್ಮರಿಸಿಕೊಂಡರು. ‘ಬೃಂದಾವಿಹಾರಿ’ಯಲ್ಲಿ ಗಣೇಶ್ಗೆ ಇಬ್ಬರು ನಾಯಕಿಯರಿದ್ದು, ಮಾಳವಿಕಾ ಶರ್ಮಾ, ದೇವಿಕಾ ಭಟ್ ಜೋಡಿಯಾಗಿದ್ದಾರೆ. ಶಾಸಕ ಹಾಗೂ ನಿರ್ವಾಪಕ ಸಮದ್ಧಿ ವಿ.ಮಂಜುನಾಥ್, ‘ಮೂಡಲಬಾಗಿಲು ಕನ್ನಡ ಹಬ್ಬದ ಸಂಭ್ರಮದ ಬೆನ್ನಲ್ಲೇ ಸ್ವಂತ ವೆಚ್ಚದಲ್ಲಿ ‘ಬೃಂದಾವಿಹಾರಿ’ ಟೀಸರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದು, ಸಾವಿರಾರು ಕನ್ನಡಾಭಿಮಾನಿಗಳು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು. ಬಳಿಕ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗೆ ನತ್ಯ ವಾಡುವ ಮೂಲಕ ಗಮನ ಸೆಳೆದರು. ಹಿರಿಯ ನಟ ರಂಗಾಯಣ ರಘು, ಕುರಿ ಪ್ರತಾಪ್, ಪಾವಗಡ ಮಂಜು, ಜಗ್ಗಪ್ಪ ಕಲಾಬಳಗದಲ್ಲಿದ್ದಾರೆ. ‘ಬೃಂದಾವಿಹಾರಿ’ ಚಿತ್ರದ ಹಾಡಿಗೆ ನಟ ಗಣೇಶ್ ಹಾಗೂ ಶಿವಣ್ಣ ಹೆಜ್ಜೆ ಹಾಕಿದರು.