ರಾಶಿಕಾ ರಾಶಿ ಕನಸು : ‘ಬಿಗ್‌ಬಾಸ್ ಕನ್ನಡ ಸೀಸನ್ 12ರ’ ಸ್ಪರ್ಧೆಯಿಂದ ಹೊರಬಂದ ‘ಮನದ ಕಡಲು’ ನಟಿ

ರಾಶಿಕಾ ಶೆಟ್ಟಿ
ರಾಶಿಕಾ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • 100ಕ್ಕೂ ಅಧಿಕ ದಿನಗಳ ಕಾಲ ದೊಡ್ಮನೆಯಲ್ಲಿದ್ದ ಮನದ ಕಡಲು ನಟಿ
  • ಆಟ, ನೋಟದಿಂದ ಗಮನಸೆಳೆದಿದ್ದ ರಾಶಿಕಾ
  • ಬಿಗ್​ಬಾಸ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಲಿರುವ ನಟಿ
ಬೆಂಗಳೂರು : ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದಿಂದ ಖ್ಯಾತಿ ಗಳಿಸಿದ್ದ ನಟಿ ರಾಶಿಕಾ ಶೆಟ್ಟಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ ಸೀಸನ್’12ರ ಸ್ಪರ್ಧಿಯಾಗಿದ್ದರು. ಆಟ, ನೋಟದ ಮೂಲಕ ಗಮನಸೆಳೆದಿದ್ದ ಅವರು ಶೋ ಕೊನೆಯ ಹಂತದಲ್ಲಿರುವಾಗಲೇ ಎಲಿಮಿನೇಟ್ ಆಗಿ ಸ್ಪರ್ಧೆಯಿಂದ ಹೊರಬಂದಿದ್ದಾರೆ. ಈ 100ಕ್ಕೂ ಅಧಿಕ ದಿನಗಳ ‘ಬಿಗ್‌ಬಾಸ್’ ಪಯಣ ಹಾಗೂ ಕಲಿಸಿದ ಪಾಠಗಳ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘‘ಮನದ ಕಡಲು’ ಸಿನಿಮಾ ತೆರೆಕಂಡು ಯಶಸ್ವಿಯಾದ ಕೆಲವೇ ಕೆಲವು ದಿನಗಳಲ್ಲಿ ‘ಬಿಗ್‌ಬಾಸ್’ನಿಂದ ಕರೆಬಂತು. ಕನ್ನಡದ ದೊಡ್ಡ ಶೋ ಇದಾಗಿರುವುದರಿಂದ ನನಗೂ ಹೊಸ ಅನುಭವ ಆಗಲಿ ಎಂದು ಒಪ್ಪಿಕೊಂಡೆ. ಇನ್ನು ಸನ್ನಿವೇಶ, ಸಂದರ್ಭಗಳನ್ನು ನಾನೇಗೆ ನಿರ್ವಹಿಸಬಲ್ಲೇ ಎಂಬುದು ನನಗೆ ಗೊತ್ತಾಗಬೇಕಿತ್ತು. ಹಾಗಾಗಿ, ‘ದೊಡ್ಮನೆ’ ಪ್ರವೇಶಿಸಿದೆ. 100 ದಿನಗಳ ಪ್ರಯಾಣದಲ್ಲಿ ಸಾಕಷ್ಟು ಕಲಿತೆ. ಜೀವನಕ್ಕೆ ಒಳ್ಳೆಯ ಅನುಭವ ಸಿಕ್ಕಿದೆ. ಇದೀಗ ಶೋನಿಂದ ಹೊರಬಂದಿದ್ದೇನೆ. ತುಂಬಾ ಜನ ನನ್ನನ್ನು ಗುರುತಿಸುತ್ತಿದ್ದು, ಒಂದೆರೆಡು ಒಳ್ಳೆಯ ಮಾತುಗಳ ಮೂಲಕ ಆಶೀರ್ವದಿಸುತ್ತಿದ್ದಾರೆ. ಮುಂದೆಯೂ ಇದೇ ಪ್ರೇಕ್ಷಕರ ಜತೆಗೆ ಇರಬೇಕು ಎಂದು ನಿರ್ಧರಿಸಿದ್ದೇನೆ’ ಎಂದು ‘ಬಿಗ್‌ಬಾಸ್’ ಜರ್ನಿ ಬಗ್ಗೆ ನಟಿ ರಾಶಿಕಾ ಶೆಟ್ಟಿ ಹಂಚಿಕೊಂಡರು.
ಬದುಕಿಗೂ ಪಾಠ
100 ದಿನಗಳ ‘ಬಿಗ್‌ಬಾಸ್’ ಪಯಣವು ನಟಿ ರಾಶಿಕಾ ಶೆಟ್ಟಿಗೆ ಬದಲಾವಣೆಗೆ ಮುನ್ನುಡಿಯಾಗಿದ್ದು ಜತೆಗೆ ಬದುಕಿಗೆ ಸಾಕಷ್ಟು ಪಾಠ ಕಲಿಸಿದೆಯಂತೆ. ‘ಸನ್ನಿವೇಶಗಳನ್ನು ಅರ್ಥಮಾಡಿಕೊಂಡು ನಿರ್ವಹಿಸುವುದು ಮತ್ತು ತಾಳ್ಮೆಯಿಂದಲೇ ಎಲ್ಲವನ್ನೂ ಗೆಲ್ಲಬಹುದು ಎನ್ನುವುದು ಈಗ ಅರ್ಥವಾಗಿದೆ. ಇನ್ನು ಜೀವನದಲ್ಲಿ ಯಾರು ಕೆಟ್ಟವರಲ್ಲ. ಸಂದರ್ಭ ಅವರನ್ನು ಕೆಟ್ಟವರನ್ನಾಗಿಸಿರಬಹುದು, ಆದರೆ, ಅವರೇ ಮುಂದೆ ನಮಗೆ ಒಳ್ಳೆಯ ಸ್ನೇಹಿತರಾಗಬಹುದು ಎಂಬುದು ‘ಬಿಗ್‌ಬಾಸ್’ ಕಲಿಸಿದ ಪ್ರಮುಖ ಪಾಠ. ಸಣ್ಣ ಸಂಗತಿಗಳನ್ನು ಎಂಜಾಯ್ ಮಾಡಿದಾಗಲೇ ‘ದೊಡ್ಮನೆ’ ಆಟ ನಮಗೆ ದಕ್ಕುತ್ತದೆ. ಭರವಸೆ ಇಟ್ಟು ಸುದೀಪ್ ಸರ್ ನನ್ನನ್ನು ಮನೆಯೊಳಗಡೆ ಕಳುಹಿಸಿದ್ದರು. ಅವರ ಭರವಸೆಯನ್ನು ಈಡೇರಿಸಿದ್ದೇನೆ ಎಂಬ ತೃಪ್ತಿಯಿದೆ. ಮುಂದೆಯೂ ಚಿತ್ರರಂಗದಲ್ಲಿಯೇ ಮುಂದುವರಿಯಲಿದ್ದೇನೆ. ನನ್ನ ‘ಪ್ಯಾರ್’ ರಿಲೀಸ್‌ಗೆ ಇದ್ದು, ಟೀಂ ಜತೆಗೂಡುವೆ’ಎನ್ನುವ ರಾಶಿಕಾ, ‘ಗಿಲ್ಲಿ ನಟ’ ‘ಬಿಗ್‌ಬಾಸ್ ಸೀಸನ್ 12ರ ಗೆಲ್ಲಬಹುದು ಎಂದು ಊಹಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net