ಬೆಂಗಳೂರು: ‘ಬಿಗ್‌ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಿ, ಆಟಕ್ಕೆ ತಿರುವು ತಂದಿದ್ದ ಸ್ಪರ್ಧಿ ನಟಿ ರಿಷಾ ಗೌಡ. ‘ದೊಡ್ಮನೆ’ ಸ್ಪರ್ಧೆ ಬಳಿಕ ರಿಷಾ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಸದ್ಯ ಅವರು ಕನ್ನಡ ಸೇರಿ ಪರಭಾಷಾ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದರಲ್ಲಿ ನಟಿಯ ‘ಬೆಂಗಳೂರು ಇನ್’ ಇದೇ 17ಕ್ಕೆ ರಿಲೀಸ್ ಆಗಲಿದೆ. ‘ಮೊದಲ ಸಿನಿಮಾ ‘ಕ್ರೇಜಿ ಕೀರ್ತಿ’ಯಲ್ಲಿ ನನ್ನ ನಟನೆ ನೋಡಿ ಓಂಪ್ರಕಾಶ್ ರಾವ್ ಸರ್ ಈ ಚಿತ್ರಕ್ಕೆ ರೆಫರ್ ಮಾಡಿದ್ದರು. ಮೊದಲ ಮೀಟಿಂಗ್‌ನಲ್ಲಿಯೇ ನಾನು ಮತ್ತು ಅನುಷಾ ಇಬ್ಬರು ಆಯ್ಕೆಯಾಗಿದ್ದೆವು. ನನ್ನ ಪಾತ್ರಕ್ಕೆ ತುಂಬಾ ಶೇಡ್‌ಗಳಿದ್ದು, ಧರ್ಮ ಕೀರ್ತಿರಾಜ್, ಶಶಿಕುಮಾರ್, ಬಲ ರಾಜವಾಡಿ ಸೇರಿ ಎಲ್ಲ ಕಲಾವಿದರ ಜತೆ ಸ್ಕ್ರೀನ್ ಸ್ಪೇಸ್ ದೊರೆತಿರುವುದು ನನ್ನ ಅದೃಷ್ಟ. ಸದ್ಯಕ್ಕೆ ಪಾತ್ರದ ಬಗ್ಗೆ ಹೆಚ್ಚು ಬಿಟ್ಟುಕೊಡುವಂತಿಲ್ಲ. ಶೂಟಿಂಗ್ ವೇಳೆ ನರ್ವಸ್ ಆಗುತ್ತಿದ್ದೆ. ಆಗ ಶಶಿಕುಮಾರ್ ಸರ್ ಸಹಜವಾಗಿ ಅಭಿನಯಿಸಿ, ಹೆದರಬೇಡಿ ಎಂದು ಧೈರ್ಯ ತುಂಬುತ್ತಿದ್ದರು’ ಎಂದು ರಿಷಾ ಶೂಟಿಂಗ್ ಅನುಭವದ ಬಗ್ಗೆ ಹಂಚಿಕೊಳ್ಳುತ್ತಾರೆ.