ಬಲರಾಮನ ಭೂಗತ ಲೋಕ: ವಿನೋದ್ ಪ್ರಭಾಕರ್ ನಟನೆಯ ಚಿತ್ರದ ಆ್ಯಕ್ಷನ್-ಟೀಸರ್ ರಿಲೀಸ್

ಬಲರಾಮನ ದಿನಗಳು ಚಿತ್ರದ ಪೋಸ್ಟರ್
ಬಲರಾಮನ ದಿನಗಳು ಚಿತ್ರದ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಭೂಗತ ಲೋಕದಲ್ಲಿ ವಿನೋದ್​ ಪ್ರಭಾಕರ್
  • ಮಾದೇವ ಬಳಿಕ ಮಚ್ಚು ಹಿಡಿದ ನಟ
  • ಆ್ಯಕ್ಷನ್​ ಟೀಸರ್ ಜಬ್ಬರ್ದಸ್ತ್​ ಸಾಹಸ ಪ್ರದರ್ಶಿಸಿದ ಕನ್ನಡದ ನಟ
ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ಬೆಂಗಳೂರು ಭೂಗತ ಲೋಕದ ಕಥಾ ಹಂದರ ಇರುವ ‘ಬಲರಾಮನ ದಿನಗಳು’ ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ನಟ ವಿನೋದ್ ಪ್ರಭಾಕರ್ ಹಾಗೂ ಪ್ರಿಯಾ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಈಗಾಗಲೇ ‘ಶುರು ಶುರು’ ಹಾಡಿನ ಮೂಲಕ ಗಮನ ಸೆಳೆದಿದ್ದ ಸಿನಿಮಾ, ಇದೀಗ ಆ್ಯಕ್ಷನ್-ಟೀಸರ್ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಸಾಮಾನ್ಯ ಯುವಕ ಹೇಗೆ ಭೂಗತ ಲೋಕದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ ಎಂಬ ಅಂಶಗಳು ಟೀಸರ್‌ನಲ್ಲಿವೆ. ಇದು 80ರ ದಶಕದ ಕಥೆಯನ್ನು ಹೇಳುವ ಚಿತ್ರವಾಗಿದ್ದು, ‘ಆ ದಿನಗಳು’ ಚಿತ್ರಕ್ಕೆ ಸಂಬಂಧ ಇರುವ ಅಂಶಗಳು ಟೀಸರ್‌ನಲ್ಲಿ ಗೋಚರಿಸಿವೆ. ನಾಯಕ ವಿನೋದ್ ಪ್ರಭಾಕರ್, ‘ಒಂದು ಸಿನಿಮಾದ ಮೂಲಕವೇ ಎಲ್ಲ ಅನುಭವ ಪಡೆಯಲು ಅಸಾಧ್ಯ. ನನ್ನ ತಂದೆ ನೂರಾರು ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದರೂ, ಸಿನಿಮಾ ಎಂದರೆ ಏನು ಎಂದು ಇನ್ನೂ ಅರ್ಥವಾಗಿಲ್ಲ ಎನ್ನುತ್ತಿದ್ದರು. ಹೀಗಾಗಿ ಒಂದೇ ಚಿತ್ರದಲ್ಲಿ ಸಿಕ್ಕ ಅನುಭವವೇ ಅಂತಿಮ ಎಂದು ಹೇಳಲಾಗದು. ‘ಮಾದೇವ’ ಕಂಡ ಯಶಸ್ಸಿನಂತೆ ‘ಬಲರಾಮನ ದಿನಗಳು’ ಕೂಡ ದೊಡ್ಡ ಮಟ್ಟದ ಯಶಸ್ಸು ಕಾಣುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು. ವಿನೋದ್, ಪ್ರಿಯಾ ಜತೆ ರಮೇಶ್ ಇಂದಿರಾ, ಅತುಲ್ ಕುಲಕರ್ಣಿ, ಆಶಿಷ್ ವಿದ್ಯಾರ್ಥಿ, ಪ್ರತಾಪ್ ನಾರಾಯಣ್, ಡ್ರಾಗನ್ ಮಂಜು, ‘ಬಿಗ್‌ಬಾಸ್’ ಸ್ಪರ್ಧಿಗಳಾದ ವಿನಯ್ ಗೌಡ, ರಜತ್ ಕಲಾಬಳಗದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net