ಈ ಹಿಂದೆ ಬಹುಭಾಷಾ ಚಿತ್ರಗಳಿಗೆ ಮಾತ್ರ ಎಡಿಸಿಸಿಯ ಕೆಲ ಅಂಶಗಳು ಕಡ್ಡಾಯವಾಗಿದ್ದವು. ಇದೀಗ ಆಯಾ ಭಾಷೆಗಳಲ್ಲಿ ಬರುವ ಚಿತ್ರಗಳಿಗೆ ಅರ್ಥಾತ್ ಕನ್ನಡ ಚಿತ್ರಕ್ಕೆ ಕನ್ನಡದಲ್ಲಿಯೇ ಕ್ಯಾಪ್ಷನ್, ಸಂಭಾಷಣೆ ಜತೆ ಹಿನ್ನೆಲೆ ಧ್ವನಿಗಳ ವಿವರಣೆಯಿದ್ದರೆ ಶ್ರವಣ ದೋಷ ಇರುವವರಿಗೆ ಸಹಾಯವಾಗುತ್ತದೆ. ಹಾಗೇ ದೃಷ್ಟಿ ದೋಷ ಇರುವವರಿಗಾಗಿ ಸಂಭಾಷಣೆ ನಡುವೆ ಪಾತ್ರಗಳ ಹಾವಭಾವಗಳು ಮತ್ತು ಸನ್ನಿವೇಶದ ಬದಲಾವಣೆಯ ಅಂಶಗಳನ್ನು ಧ್ವನಿಯ ಮೂಲಕ ವಿವರಣೆ ಇರಬೇಕು. ಇದರಿಂದ ಕಥೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಂಜ್ಞೆ ಭಾಷೆಯ ಅನುಷ್ಠಾನದ ಚರ್ಚೆಗಳು ಸಹ ನಡೆಯುತ್ತಿದ್ದು, ಇತರ ಪ್ರೇಕ್ಷಕರಿಗೆ ತೊಂದರೆಯಾಗದಂತೆ ಈ ಸೌಲಭ್ಯವನ್ನು ಪ್ರತ್ಯೇಕ ಉಪಕರಣಗಳು ಅಥವಾ ಸಿಂಕ್ರೊನೈಸ್ ಮಾಡಿದ ಪರದೆಗಳ ಮೂಲಕ ಒದಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಥಿಯೇಟರ್, ಮಲ್ಟಿಪ್ಲೆಕ್ಸ್ನಲ್ಲಿ ಪ್ರತಿ 200 ಸೀಟುಗಳಲ್ಲಿ ಐದು ಸೀಟುಗಳನ್ನು ದೃಷ್ಟಿ, ಶ್ರವಣದೋಷ ಇರುವವರಿಗೆ ಮೀಸಲಿಡಬೇಕು. ಆ ಸೀಟುಗಳಲ್ಲಿ ಅವರು ಸಿನಿಮಾ ವೀಸಲು ಬೇಕಾದ ಹೆಡ್ೋನ್, ಆ್ಯಪ್, ಸ್ಪೆಷಲ್ ಸ್ಕ್ರೀನ್ ಸೇರಿ ಇತರೆ ವ್ಯವಸ್ಥೆಗಳನ್ನು ಮಾಡಬೇಕು.