ಚಿತ್ರದಲ್ಲಿ ಆರ್ಯನ್ ತೇಜಸ್ಗೆ "ಭಾರ್ಗವಿ ಎಲ್ಎಲ್ಬಿ' ಧಾರಾವಾಹಿ ಖ್ಯಾತಿಯ ನಟ ರಾಧಾ ಭಗವತಿ ಜೋಡಿಯಾಗಿದ್ದು, ಮಾ. ಭವೀಶ್, ಕರಿಸುಬ್ಬು, ಎಂ.ಕೆ.ಮಠ, ವೆಂಕಟೇಶ್, ಅಪೂರ್ವ ತಾರಾಗಣದಲ್ಲಿದ್ದಾರೆ. ನಾಯಕಿ ರಾಧಾ ಭಗವತಿ, "ಇದು ನನ್ನ ಐದನೇ ಸಿನಿಮಾ. ಮಧ್ಯಮವರ್ಗದ ಕುಟುಂಬದ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಕೆಲಸ ಮಾಡುವಾಗ ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. ಏನಾದರೂ ಸಾಧಿಸುವ ಕನಸಿದ್ದರೂ, ಗಂಡ ಮತ್ತು ಮಗನಿಗಾಗಿ ತನ್ನ ಆಸೆಗಳನ್ನು ಬದಿಗೊತ್ತಿ ಅವರ ಸಪೋರ್ಟ್ಗೆ ನಿಲ್ಲುವ ಪಾತ್ರ' ಎನ್ನುತ್ತಾರೆ. ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸಿನಿಮಾ ಇದೇ ಏ.3ರಂದು ರಿಲೀಸ್ ಆಗಲಿದೆ.