ಬೆಂಗಳೂರು: ಗೀತ, ಗುರುದೇವ ಹೊಯ್ಸಳ ಖ್ಯಾತಿಯ ನಿರ್ದೇಶಕ ವಿಜಯ್ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ಆಲ್ಫಾ. ಟೈಟಲ್ ಕಾರಣದಿಂದ ಈ ಚಿತ್ರ ಹೆಚ್ಚು ಸದ್ದು ಮಾಡುತ್ತಿದೆ. ಮಾಲೂರು ಮೂಲದ ಹೊಸ ಪ್ರತಿಭೆ ಹೇಮಂತ್ ಕುಮಾರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅವರಿಗೆ ಇಬ್ಬರು ನಾಯಕಿಯಿದ್ದು, ಎಕ್ಸ್ ಆ್ಯಂಡ್ ವೈ ನಟಿ ಅಯನಾ, ಕೇರಳ ಮೂಲದ ಗೋಪಿಕಾ ಸುರೇಶ್ ಜೋಡಿಯಾಗಿದ್ದಾರೆ. ಇದೇ ತಿಂಗಳ 20ಕ್ಕೆ ಸಿನಿಮಾ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ.