'ಪರಮಾತ್ಮ'ನ ಹುಟ್ಟುಹಬ್ಬಕ್ಕೆ 'ಆಕಾಶ್'​ ರೀ-ಎಂಟ್ರಿ! ಈ ದಿನದಂದು ತೆರೆ ಕಾಣಲಿದೆ 'ಅಪ್ಪು' ನಟನೆಯ ಬ್ಲಾಕ್​ಬಸ್ಟರ್​​ ಚಿತ್ರ

ಪುನೀತ್​ ರಾಜ್​ಕುಮಾರ್​ ನಟನೆಯ 'ಆಕಾಶ್​' ಸಿನಿಮಾದ ಪೋಸ್ಟರ್​
ಪುನೀತ್​ ರಾಜ್​ಕುಮಾರ್​ ನಟನೆಯ 'ಆಕಾಶ್​' ಸಿನಿಮಾದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಮಾ.17ಕ್ಕೆ ಡಾ.ಪುನೀತ್ ರಾಜ್​ಕುಮಾರ್ ಜನ್ಮದಿನ
  • 'ಅಪ್ಪು' ಹುಟ್ಟುಹಬ್ಬಕ್ಕೆ ಫ್ಯಾನ್ಸ್​ಗಳಿಗೆ 'ಆಕಾಶ್​' ಗಿಫ್ಟ್​
  • ಮಾ.13ರಂದು ತೆರೆಗೆ ಬರಲಿದೆ ಬ್ಲಾಕ್​ಬಸ್ಟರ್ ಸಿನಿಮಾ
ಬೆಂಗಳೂರು: ಕನ್ನಡ ಚಿತ್ರರಂಗದ ನೆಚ್ಚಿನ 'ಪವರ್​ಸ್ಟಾರ್'​, ಅಭಿಮಾನಿಗಳ ಪ್ರೀತಿಯ 'ಅಪ್ಪು', ಡಾ. ಪುನೀತ್ ರಾಜ್​ಕುಮಾರ್​ ಅಭಿನಯದ 2005ರಲ್ಲಿ ತೆರೆಕಂಡ ಬ್ಲಾಕ್​ಬಸ್ಟರ್​ ಹಿಟ್​ 'ಆಕಾಶ್'​ ಸಿನಿಮಾ ಇದೀಗ ರೀ-ರಿಲೀಸ್​ಗೆ ಎದುರುನೋಡುತ್ತಿದೆ. ಇದು ಪುನೀತ್​ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. 
ಕರುನಾಡಿನಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್​ಕುಮಾರ್​ ಅವರ ಜನ್ಮದಿನವನ್ನು ಈ ಬಾರಿ ಇನ್ನೂ ವಿಶೇಷವಾಗಿ ಸಂಭ್ರಮಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ ಹಾಗೂ ಸಾಕಷ್ಟು ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಪುನೀತ್ ಅವರ ಪತ್ನಿ, ನಿಮಾರ್ಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ಹುಟ್ಟುಹಬ್ಬಕ್ಕೆ ಅವರ ಫ್ಯಾನ್ಸ್​ಗಳಿಗೆ 'ಆಕಾಶ್'​ ಸಿನಿಮಾವನ್ನು ಮರುಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
​ಮಾರ್ಚ್​ 17ರಂದು ಅಪ್ಪು ಜನ್ಮದಿನದ ಹಿನ್ನೆಲೆ ಅಂದಿನ ಸಮಯಕ್ಕೆ ಬಾಕ್ಸ್​ಆಫೀಸ್​ನಲ್ಲಿ ದಾಖಲೆ ಬರೆದು, ಸೂಪರ್​ಹಿಟ್​ ಸಾಲಿಗೆ ಸೇರಿದ 'ಆಕಾಶ್'​ ಚಿತ್ರವನ್ನು ಮಾ.13ರಂದು ಮತ್ತೆ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಕಳೆದ ವರ್ಷಗಳಲ್ಲಿ ಪುನೀತ್ ಅವರ ಹುಟ್ಟುಹಬ್ಬಕ್ಕೆ 'ಜಾಕಿ' ಮತ್ತು 'ಅಪ್ಪು' ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿತ್ತು. ಈ ಚಿತ್ರಗಳನ್ನು ಸಿನಿಪ್ರಿಯರು ಮತ್ತು ನಟನ ಅಭಿಮಾನಿಗಳು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಹೊಡೆದು, ಕುಣಿದು ಸಂಭ್ರಮಿಸಿದ್ದು ವಿಶೇಷ. ಈಗ, ಆಕಾಶ್​ ಸರದಿ ಎಂಬುದು ಮತ್ತೊಂದು ವಿಶೇಷವೇ ಸರಿ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net