ಹೌದು, ಎಐ ಮೂಲಕ ರಚನೆ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋಗಳಲ್ಲಿ ಶಿವಣ್ಣ, ಸುದೀಪ್ ಮತ್ತು ಯಶ್ ಅವರು ನಟ ದರ್ಶನ್ರನ್ನು ನೋಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಬಂದಿದ್ದಾರೆ. ದರ್ಶನ್ಗೆ ಹಣ್ಣುಗಳನ್ನು ಕೊಡುತ್ತಿರುವುದು, ದರ್ಶನ್ ಜತೆ ಕುಳಿತು ಮಾತನಾಡುತ್ತಿರುವುದು, ದರ್ಶನ್ ಜತೆ ಕೇರಂ ಬೋರ್ಡ್ ಆಡುತ್ತಿರುವುದು, ದರ್ಶನ್ ಜತೆ ಊಟ ಮಾಡುತ್ತಿರುವುದು ಮತ್ತು ಕೊನೆಯಲ್ಲಿ ದರ್ಶನ್ಗೆ ಬೈ ಬೈ ಹೇಳಿ ಜೈಲಿನಿಂದ ಹೊರಗಡೆ ಬರುತ್ತಿರುವ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಟ್ರೂ ಕನ್ನಡ ಮೀಡಿಯಾ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.