ಟೆರರ್ ಆದಿತ್ಯ : ಇದೇ 10ಕ್ಕೆ ತೆರೆ ಮೇಲೆ ಮೂಡಿಬರಲಿದೆ ಆ್ಯಕ್ಷನ್-ಡ್ರಾಮಾ

ಟೆರರ್​ ಚಿತ್ರತಂಡ
ಟೆರರ್​ ಚಿತ್ರತಂಡ
Published on

ಪ್ರಮುಖ ಮುಖ್ಯಾಂಶಗಳು

  • ದೊಡ್ಡಮಟ್ಟದ ಸಕ್ಸಸ್ ಗೆ ಕಾಯುತ್ತಿರುವ ನಟ ಆದಿತ್ಯ
  • ಟೆರರ್ ಮೂಲಕ ತೆರೆ ಮೇಲೆ ಬರಲು ಸಿದ್ಧರಾದ ನಟ
  • ಚಿತ್ರದ ಟ್ರೇಲರ್ ನಲ್ಲಿ ಆ್ಯಕ್ಷನ್​ ರೂಪದಲ್ಲಿ ಕಾಣಿಸಿಕೊಂಡು ಎದೆಗಾರಿಕೆ ತೋರಿಸಿದ ನಟ
ಬೆಂಗಳೂರು: ‘ಡೆಡ್ಲಿ ಸೋಮ’ ನಟ ಆದಿತ್ಯ ದೊಡ್ಡ ಮಟ್ಟದ ಸಕ್ಸಸ್‌ಗೆ ಎದುರು ನೋಡುತ್ತಿದ್ದಾರೆ. ಪ್ರತಿ ವರ್ಷ ವಿಭಿನ್ನ ಸಿನಿಮಾಗಳ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುವ ಅವರಿಗೆ ನಿರೀಕ್ಷಿತ ಗೆಲುವು ದಕ್ಕಿಲ್ಲ. ಇದೀಗ ‘ಟೆರರ್’ ಎಂಬ ಹೊಸ ಸಿನಿಮಾದ ಮೂಲಕ ದೊಡ್ಡ ಸಕ್ಸಸ್‌ನ ನಿರೀಕ್ಷೆಯಲ್ಲಿದ್ದಾರೆ. ಇದು ರಂಜನ್ ಶಿವರಾಮ್‌ಗೌಡ ನಿರ್ದೇಶನದ ಚಿತ್ರವಾಗಿದ್ದು, ಇದೇ 10ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಆದಿತ್ಯ ಆ್ಯಕ್ಷನ್ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ‘ಚಿಕ್ಕಂದಿನಲ್ಲಿ ಆಡಲು ಯಾವುದೇ ಮೈದಾನಕ್ಕೆ ಹೋದವನಲ್ಲ. ನಾನು ಬೆಳೆದಿದ್ದೆ ಸಿನಿಮಾ ಸ್ಟುಡಿಯೋದಲ್ಲಿ. ಆಗ ನನಗೆ ಸಾಕಷ್ಟು ಹಿರಿಯ ಕಲಾವಿದರ ಪರಿಚಯವಾಗಿ ಒಡನಾಟ ಬೆಳಸಿಕೊಂಡು ಅವರಿಂದ ತುಂಬ ಕಲಿತಿದ್ದೇನೆ. ಇನ್ನು ಬಹಳಷ್ಟು ಜನ ‘ಟೆರರ್’ ಚಿತ್ರ ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ನಿರ್ಮಾಪಕರು ಯಾರ ಮಾತಿಗೂ ಕಿವಿಗೊಡದೆ ಸಿನಿಮಾ ಮಾಡಿ ಮುಗಿಸಿದ್ದಾರೆ. 21 ವರ್ಷಗಳ ಬಳಿಕ ನಾನು, ಶ್ರೀನಗರ ಕಿಟ್ಟಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷತೆ. ಇನ್ನು ರಾಜ್ಯದಲ್ಲಿಯೇ ಕನ್ನಡ ಚಿತ್ರರಂಗ ಅಳಿವು-ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ಚಿತ್ರರಂಗ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ಹಾಗಾಗಿ, ಪ್ರೇಕ್ಷಕರು ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡಬೇಕು’ ಎಂದು ಮನವಿ ಮಾಡಿದರು. ಆದಿತ್ಯ ಜತೆಗೆ ಮುಂಬೈ ಮೂಲದ ಶಿವಾಂಗಿ, ಶ್ರೀನಗರ ಕಿಟ್ಟಿ, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ ಕಲಾ ಬಳಗದಲ್ಲಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ನವೀನ್ ಅಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net