ಇದೊಂದು ಸೋಷಿಯಲ್ ಡ್ರಾಮಾ ಜಾನರ್ ಚಿತ್ರವಾಗಿದ್ದರೂ ರೊಮ್ಯಾನ್ಸ್, ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ ಸೇರಿ ಹಲವು ಅಂಶಗಳನ್ನು ಸೇರಿಸಿ ನಿರ್ದೇಶಕ ನವೀನ್ ಶಕ್ತಿ ತಮ್ಮ ಶಕ್ತಿಯನ್ನು ಅನಾವರಣಗೊಳಿಸಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಗಳಿಸಿದ್ದಾರೆ. ಆದರ್ಶ್, ಸುಷ್ಮಿತಾ, ನಿವಿಷ್ಕಾ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ, ಪೊಲೀಸ್ ಅಧಿಕಾರಿ ಯುವರಾಜ್ ಒಂಟಿಮನಿ ಪಾತ್ರದಲ್ಲಿ ರಮೇಶ್ ಇಂದಿರ ಎಲ್ಲರಿಗೂ ಒಂದು ಹೆಜ್ಜೆ ಮುಂದಿದ್ದಾರೆ. ಅಷ್ಟು ಚೆನ್ನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಸಶಕ್ತವಾಗಿ ಮೂಡಿಬಂದಿದೆ. ಕೆಲವೆಡೆ ಕಥೆ, ಉಪಕಥೆಗಳ ನಡುವೆ ಅಲ್ಲಲ್ಲಿ ಲಿಂಕ್ ಮಿಸ್ ಆಗುವ ಕಾರಣ, ಪ್ರೇಕ್ಷಕರಿಗೆ ಗೊಂದಲ ಉಂಟಾಗಬಹುದು. ಆದರೂ, ಪ್ರೇಕ್ಷಕರು ಈ ಕ್ಯಾಲೆಂಡರ್ ನೋಡಲು ಕ್ಯಾಲೆಂಡರ್ನಲ್ಲಿ ಒಂದು ದಿನ ಮಾರ್ಕ್ ಮಾಡಿಕೊಳ್ಳಬಹುದು.