ನಟಿ ಮೀನಾ ಮನೆ ಅಮೆರಿಕ ದಂಪತಿ ಪಾಲು: 10 ಕೋಟಿಯ ಬಂಗಲೆಗೆ 100 ಕೋಟಿ ಸುರಿದಿದ್ದೇಕೆ ಫಾರಿನರ್ಸ್? Actress Meena

ನಟಿ ಮೀನಾ ಮನೆ ಅಮೆರಿಕ ದಂಪತಿ ಪಾಲು: 10 ಕೋಟಿಯ ಬಂಗಲೆಗೆ 100 ಕೋಟಿ ಸುರಿದಿದ್ದೇಕೆ ಫಾರಿನರ್ಸ್? Actress Meena
ನಟಿ ಮೀನಾ ಮನೆ ಅಮೆರಿಕ ದಂಪತಿ ಪಾಲು: 10 ಕೋಟಿಯ ಬಂಗಲೆಗೆ 100 ಕೋಟಿ ಸುರಿದಿದ್ದೇಕೆ ಫಾರಿನರ್ಸ್? Actress Meena
Published on

ಪ್ರಮುಖ ಮುಖ್ಯಾಂಶಗಳು

  • ಬಹುಭಾಷಾ ನಟಿ ಮೀನಾ ಅವರು ಚೆನ್ನೈನಲ್ಲಿ ನಿರ್ಮಿಸಿದ ತಮ್ಮ ಮನೆಯನ್ನು ಮಾರಿದ್ದಾರೆ ಎಂಬ ಸುದ್ದಿ ಇದೆ
  • 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ತಮ್ಮ ಮನೆಯನ್ನು 100 ಕೋಟಿಗೆ ಮಾರಿದ್ದಾರೆ ಎನ್ನಲಾಗುತ್ತಿದೆ
  • ಅಮೆರಿಕದ ದಂಪತಿ ಇಷ್ಟು ದೊಡ್ಡ ಮೊತ್ತಕ್ಕೆ ಈ ಮನೆಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ
  • ಆದರೆ ಈ ವಿಷಯದಲ್ಲಿ ನಟಿಯಿಂದ ಈವರೆಗೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ
ಚೆನ್ನೈ: ಬಹುಭಾಷಾ ನಟಿ ಮೀನಾ ( Actress Meena ) ಅವರು ಚೆನ್ನೈನಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ತಮ್ಮ ಮನೆ ಮತ್ತು ಭೂಮಿಯನ್ನು ಬರೋಬ್ಬರಿ 100 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ದಂಪತಿ ಇಷ್ಟು ದೊಡ್ಡ ಮೊತ್ತಕ್ಕೆ ಈ ಮನೆಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಕ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಕೆಲವು ತಮಿಳು ಮಾಧ್ಯಮಗಳು ಸುದ್ದಿ ಹರಡುತ್ತಿವೆ. ಆದಾಗ್ಯೂ, ಈ ವಿಷಯದಲ್ಲಿ ನಟಿಯಿಂದ ಈವರೆಗೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಮನೆಯ ವಿಶೇಷತೆ ಏನು?

ನಟಿಯ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿದ ನಂತರವೂ, ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೀನಾ ಅವರು ತನ್ನ ಪತಿ ವಿದ್ಯಾಸಾಗರ್ ಮತ್ತು ಮಗಳು ನೈನಿಕಾ ಅವರೊಂದಿಗೆ ವಾಸಿಸುತ್ತಿದ್ದ ಮನೆ ಇದು. ಮೀನಾ 20 ವರ್ಷಗಳ ಹಿಂದೆ ಸಾಲ ಪಡೆದು ಈ ಮನೆಯನ್ನು ನಿರ್ಮಿಸಿದರು. ಈ ಮನೆ ಕೇರಳ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದರಲ್ಲಿ ಸಾಂಪ್ರದಾಯಿಕ ಕೆತ್ತಿದ ಮರದ ಕಂಬಗಳು, ಅಂಗಳ ಮತ್ತು ಅರಮನೆಯಂತಹ ವಿನ್ಯಾಸ ಸೇರಿವೆ.
ಸದ್ಯಕ್ಕೆ ಮನೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಕಾಲಿವುಡ್​ ಗಲ್ಲಿಯಲ್ಲಿ ಸಖತ್​ ಸದ್ದು ಮಾಡುತ್ತಿದೆ. ಈ ಬಗ್ಗೆ ನಟಿ ಮೀನಾ ಅವರು ಏನು ಹೇಳುತ್ತಾರೆ ಅನ್ನೋದನ್ನು ಕಾದುನೋಡಬೇಕಾಗಿದೆ.
ನಟಿ ಮೀನಾ ಕುರಿತು ಹೇಳುವುದಾದರೆ, ಅವರು ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು ಮತ್ತು ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.
ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಾಂಪತ್ಯ ಜೀವನ ಚೆನ್ನಾಗಿ ಸಾಗುವಾಗಲೇ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ.
ನಟಿ ಮೀನಾ ಅವರ ಹೊಸ ಸಿನಿಮಾ ದೃಶ್ಯಂ 3 ಅನ್ನು ಜೀತು ಜೋಸೆಫ್ ಅವರೇ ನಿರ್ದೇಶಿಸಿದ್ದಾರೆ ಮತ್ತು ಮೋಹನ್ ಲಾಲ್ ನಾಯಕನಾಗಿ ನಟಿಸಿದ್ದಾರೆ. ಮೀನಾ ಇತ್ತೀಚೆಗೆ ಜೀತು ಜೋಸೆಫ್ ನಿರ್ದೇಶನದ ರೋಸ್ಲಿನ್ ಎಂಬ ವೆಬ್ ಸರಣಿಯಲ್ಲಿಯೂ ನಟಿಸಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net