Deepika Aradhya - ಅಚ್ಚುಮೆಚ್ಚಿನ ದೇವಿಯ ಹಬ್ಬ

ಕನ್ನಡದ "ಬಾಡಿ ಗಾಡ್​', "ಔರಾ', "ಸಪ್ಲೆಯರ್​ ಶಂಕರ', "ಅಮರಪ್ರೇಮಿ ಅರುಣ್​' ಚಿತ್ರಗಳು ಸೇರಿ ಮಲಯಾಳಂನ "ಅಕಳೆ', "ಅನಿಯದಿಪ್ರಾವು' ಸೀರಿಯಲ್​ಗಳಲ್ಲಿ ಮಿಂಚಿರುವ ಹೆಗ್ಗಳಿಕೆ ನಟಿ ದೀಪಿಕಾ ಆರಾಧ್ಯಗೆ ಸಲ್ಲುತ್ತದೆ. ಇಂತಹ ದೀಪಿಕಾ ಸದ್ಯ ಮಲಯಾಳಂ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಸದ್ಯ ಕೇರಳದಲ್ಲಿದ್ದಾರೆ. ಶೂಟಿಂಗ್​ ಬಿಜಿಯ ನಡುವೆಯೂ ದಸರಾ ಹಬ್ಬ ಆಚರಿಸುತ್ತಿದ್ದಾರೆ.
ನಟಿ ದೀಪಿಕಾ ಆರಾಧ್ಯ
ನಟಿ ದೀಪಿಕಾ ಆರಾಧ್ಯ
Published on: 

ಬೆಂಗಳೂರು: ಕನ್ನಡದ "ಬಾಡಿ ಗಾಡ್​', "ಔರಾ', "ಸಪ್ಲೆಯರ್​ ಶಂಕರ', "ಅಮರಪ್ರೇಮಿ ಅರುಣ್​' ಚಿತ್ರಗಳು ಸೇರಿ ಮಲಯಾಳಂನ "ಅಕಳೆ', "ಅನಿಯದಿಪ್ರಾವು' ಸೀರಿಯಲ್​ಗಳಲ್ಲಿ ಮಿಂಚಿರುವ ಹೆಗ್ಗಳಿಕೆ ನಟಿ ದೀಪಿಕಾ ಆರಾಧ್ಯಗೆ ಸಲ್ಲುತ್ತದೆ. ಇಂತಹ ದೀಪಿಕಾ ಸದ್ಯ ಮಲಯಾಳಂ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಸದ್ಯ ಕೇರಳದಲ್ಲಿದ್ದಾರೆ. ಶೂಟಿಂಗ್​ ಬಿಜಿಯ ನಡುವೆಯೂ ದಸರಾ ಹಬ್ಬವನ್ನು ಸಂಭ್ರಮದಿಂಸ ಆಚರಿಸುತ್ತಿದ್ದಾರೆ.

ದೀಪಿಕಾ ಆರಾಧ್ಯ
ದೀಪಿಕಾ ಆರಾಧ್ಯ

ಈ ಬಗ್ಗೆ, "ನವರಾತ್ರಿ ದೇವಿಯ ಹಬ್ಬವಾದ ಕಾರಣ ನನಗೆ ಫೇವರಿಟ್​ ಹಬ್ಬ. ನಾನು ಆಧ್ಯಾತ್ಮಕ್ಕೆ ಹೆಚ್ಚು ಕನೆಕ್ಟ್​ ಆಗುತ್ತೇನೆ. ಬಾಲ್ಯದಲ್ಲಿ ಶಾಲಾ, ಕಾಲೇಜು ದಿನಗಳಲ್ಲಿ ಕುಟುಂಬದ ಜತೆ ಹಲವು ಬಾರಿ ಮೈಸೂರು ದಸರಾ ಕಣ್ತುಂಬಿಕೊಂಡಿದ್ದೇನೆ. ಆ ನೆನಪುಗಳು ಈಗಲೂ ಹಸಿರಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕೆಲಸದ ಒತ್ತಡದಿಂದಾಗಿ ಮೈಸೂರು ದಸರಾಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಶೂಟಿಂಗ್​ ನಡುವೆಯೇ ಕೇರಳದಲ್ಲಿ ಎರಡು ದೇವಿಯ ದೇವಸ್ಥಾನಗಳಿಗೆ ಹೋಗಿ ಬಂದೆ. ನಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸುವುದಿಲ್ಲ. ನನ್ನ ಸೋದರ ಸಂಬಂಧಿ ಮನೆಯಲ್ಲಿ ಗೊಂಬೆಗಳನ್ನು ಕೂರಿಸುವ ಕಾರಣ, ಅಲ್ಲಿ ಹೋಗಿ ನಾನೂ ಸೇರಿಕೊಳ್ಳುತ್ತೇನೆ. ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಕುಟುಂಬದವರು, ಸಂಬಂಧಿಕರು ಎಲ್ಲರೂ ಒಂದೆಡೆ ಸೇರುವುದು ವಾಡಿಕೆ. ಹಾಗೇ ನಾನು ಒಂಬತ್ತು ದಿನಗಳ ಕಾಲ ಪ್ರತಿದಿನ ಒಂದೊಂದು ಬಣ್ಣದ ಸೀರೆಯುಟ್ಟು ದೇವಿಯ ದರ್ಶನ ಪಡೆಯುತ್ತೇನೆ. ಇನ್ನು ಆಯುಧ ಪೂಜೆಯನ್ನಂತೂ ನಾವು ತುಂಬ ಗ್ರಾ$ಂಡಾಗಿ ಆಚರಿಸುತ್ತೇವೆ. ಈ ಬಾರಿಯ ದಸರಾ ಸಮಯದಲ್ಲೇ ಕನ್ನಡದಲ್ಲಿ ಎರಡು ಕಥೆಗಳನ್ನು ಕೇಳುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಫೈನಲ್​ ಆಗುವ ನಿರೀಕ್ಷೆಯಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ ದೀಪಿಕಾ ಆರಾಧ್ಯ.

ದೀಪಿಕಾ ಆರಾಧ್ಯ
ದೀಪಿಕಾ ಆರಾಧ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net