ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಹೀಗಿತ್ತು, `ನಾನು ಸಾಮಾನ್ಯವಾಗಿ ಯಾವ ವಿಚಾರದ ಬಗ್ಗೆಯೂ ಮಾತನಾಡೋಕೆ ಹೋಗೋದೆ ಇಲ್ಲ. ಆದರೆ, ಇವತ್ತು ಒಂದು ಸೀಕ್ರೇಟ್ ಹೇಳಲೇ ಬೇಕು ಎಂದು ಬಂದಿದ್ದೇನೆ. ನಾನು ಶೂಟ್ಗೆ ತೆರಳಿದಾಗ ಸೆಟ್ನಲ್ಲಿ ಎಲ್ಲರೂ ನನಗೆ ಅಭಿನಂದನೆ ಸಲ್ಲಿಸುತ್ತಿದ್ದರು. ಏಕೆ ಹೀಗೆ ಎಂದು ನನಗೆ ಆಶ್ಚರ್ಯ ಆಯ್ತು. ನಾನು ಮೊಬೈಲ್ ಗಮನಿಸಿದಾಗ ಎಷ್ಟೊಂದು ಸಂದೇಶಗಳು ಬಂದಿದ್ದವು. ಅದು ನನ್ನ ಆತ್ಮೀಯ ಗೆಳೆಯ ರಾಘವ್ ಜೊತೆಗೆ ಎಂಗೇಜ್ಮೆಂಟ್ ಆಗಿದೆ ಎಂದು ಪುಕಾರು ಎದ್ದಿತ್ತು. ಹೌದು, ನಿಶ್ಚಿತಾರ್ಥ ಆಯ್ತು. ಆದರೆ, ನಾವು ಹೋಗಲಿಕ್ಕೆ ಸಾಧ್ಯನೇ ಆಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.