ಐಶಾನಿ ಶೆಟ್ಟಿ "ಕಾಜಾಣ' ಮೂಲಕ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಮೊದಲ ಬಾರಿಗೆ ಕಥೆ ಬರೆದು, ನಿರ್ದೇಶಿಸುವುದರ ಜತೆ ಜತೆಗೆ ಶಾಕುಂತಲೆ ಸಿನಿಮಾಸ್ ಬ್ಯಾನರ್ನಲ್ಲಿ ನಿರ್ಮಿಸುತ್ತಿದ್ದಾರೆ. "ಕಳೆದ ಒಂದು ವರ್ಷದಿಂದ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಶೂಟಿಂಗ್ ಹೋದಮೇಲೆ ನಿಜವಾದ ಸವಾಲು ಗೊತ್ತಾಗುತ್ತದೆ. ನಿರ್ದೇಶನಕ್ಕಿಂತ, ನಿರ್ಮಾಣ ಕಠಿಣವೆನಿಸಲಿದೆ. ಆದರೆ, ಕುಟುಂಬದವರೂ ನಿರ್ಮಾಣದಲ್ಲಿ ಜತೆಯಾಗಿದ್ದು, ಚಿತ್ರದ ಬೇಕು&ಬೇಡಗಳ ಬಗ್ಗೆ ನನಗೆ ಅರಿವಿದ್ದು, ತುಂಬ ಹೋಮ್ವರ್ಕ್ ಮಾಡಿಕೊಂಡಿದ್ದೇನೆ. ಪ್ಲ್ಯಾನಿಂಗ್ ಚೆನ್ನಾಗಿ ಮಾಡಿಕೊಂಡಿದ್ದೇವೆ. ಎಲ್ಲ ವಿಷಯಗಳಲ್ಲೂ ರೆಡಿಯಾಗಿರುವ ಕಾರಣ ಯಾವುದೇ ಗೊಂದಲವಿಲ್ಲದೇ ನಿಭಾಯಿಸುವ ಭರವಸೆಯಿದೆ. ಇದೇ ವರ್ಷ ಸಿನಿಮಾ ರಿಲೀಸ್ ಆಗಲಿದೆ' ಎನ್ನುತ್ತಾರೆ ಐಶಾನಿ.