Rajavardhan - ಬ್ರೇಕ್​ನ ನಂತರ ಪ್ಯಾನ್​ ಏಷಿಯಾ ಚಿತ್ರದ ಸಿದ್ಧತೆಯಲ್ಲಿ ರಾಜವರ್ಧನ್

ರಾಜವರ್ಧನ್​
ರಾಜವರ್ಧನ್​
Published on
Actor Rajavardhan -
"ಬಿಚ್ಚುಗತ್ತಿ', "ಪ್ರಣಯಂ', "ಗಜರಾಮ', "ಹಿರಣ್ಯ' ಚಿತ್ರಗಳ ಖ್ಯಾತಿಯ ನಾಯಕ ನಟ ರಾಜವರ್ಧನ್​ ಸದ್ಯ "ಜಾವಾ' ಸಿನಿಮಾದಲ್ಲಿ ಬಿಜಿಯಿದ್ದಾರೆ. ಅದರ ನಡುವೆಯೇ ಸದ್ದಿಲ್ಲದೇ ಪ್ಯಾನ್​ ಏಷಿಯಾ ಚಿತ್ರಕ್ಕಾಗಿ ಸಿದ್ಧತೆ ಕೂಡ ನಡೆಸುತ್ತಿದ್ದಾರೆ. ಆ ಮೂಲಕ ಕನ್ನಡದಿಂದ ಪ್ಯಾನ್​ ಇಂಡಿಯಾ, ಪ್ಯಾನ್​ ವರ್ಲ್ಡ್​ ಹೊರಟಿರುವ ಯಶ್​, ರಿಷಬ್​ ಶೆಟ್ಟಿ, ಕಿಚ್ಚ ಸುದೀಪ್​, ಧ್ರುವ ಸರ್ಜಾ ಅವರಂತಹ ನಟರ ಸಾಲಿಗೆ ಸೇರಿದ್ದಾರೆ. ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್​ ಪುತ್ರನಾಗಿದ್ದರೂ, ತಮ್ಮದೇ ಛಾಪು ಮೂಡಿಸುತ್ತಿರುವ ರಾಜವರ್ಧನ್​ ಇದುವರೆಗೆ ನಟಿಸಿರುವ ನಾಲ್ಕು ಚಿತ್ರಗಳಲ್ಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರಾದೇಶಿಕ ಪ್ರಯೋಗಗಳ ಅನುಭವ ಮತ್ತು ದೊಡ್ಡ ಸಿನಿಮಾ ಕನಸಿನ ಹುಡುಕಾಟ ಎಂಬಂತೆ ತಮ್ಮದೇ ತಂಡ ಕಟ್ಟಿಕೊಂಡು ಪ್ಯಾನ್​ ಏಷಿಯಾ ಪ್ರಾಜೆಕ್ಟ್​ ಒಂದಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಸೈಲೆಂಟಾಗಿ ಚಿತ್ರದ ಮುಹೂರ್ತ ನೆರವೇರಿಸಿರುವ ಚಿತ್ರತಂಡ, ಸದ್ಯ ಪ್ರಿ-ಪ್ರೊಡಕ್ಷನ್​ ಕೆಲಸಗಳಲ್ಲಿ ಬಿಜಿಯಾಗಿದೆ. ಕಳೆದ ಐದು ವರ್ಷಗಳಿಂದ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸುವ ಆಲೋಚನೆ ಚಿತ್ರತಂಡದ್ದು. ಅದಕ್ಕೂ ಮುನ್ನ ತಾರಾಗಣ ಮತ್ತು ತಂತ್ರಜ್ಞರ ಕುರಿತು ಮಾಹಿತಿ ನೀಡಲಿದ್ದಾರೆ. 2025ರ ಫೆ. 7ರಂದು ರಾಜವರ್ಧನ್​ ನಟಿಸಿದ್ದ "ಗಜರಾಮ' ರಿಲೀಸ್​ ಆಗಿತ್ತು. ಆ ಬಳಿಕ "ಜಾವಾ' ಘೋಷಣೆಯಾಗಿತ್ತು. ಆದರೆ, ಅದಕ್ಕೂ ಮುನ್ನ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.
ಕೋಟ್​:
"ಬಿಚ್ಚುಗತ್ತಿ'ಯಿಂದ "ಗಜರಾಮ'ವರೆಗೂ ಒಂದೊಂದು ಚಿತ್ರದಿಂದ ಒಂದೊಂದು ಪಾಠ ಕಲಿತಿದ್ದೇನೆ. ಅದೇ ಅನುಭವದೊಂದಿಗೆ ಕಳೆದ ವರ್ಷ "ಕಮಲ್​ ಶ್ರೀದೇವಿ' ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದೆ. ಆ ಮೂಲಕ ಸಿನಿಮಾ ಒಳಗಿನ & ಹೊರಗಿನ ಬೇಕು& ಬೇಡ ಮತ್ತು ವ್ಯಾವಹಾರಿಕ ಜ್ಞಾನ ಕಲಿತೆ. ಈ ಅನುಭವಗಳೊಂದಿಗೆ ಇದೀಗ ನಾನು ನನ್ನ ಅಸಲಿ ಸಿನಿಮಾ ಪಯಣ ಆರಂಭಿಸಲಿದ್ದೇನೆ. ಈ ಚಿತ್ರ ನನ್ನ ಸಿನಿಮಾ ಕನಸು, ದಾರಿ, ಗುರಿಯಾಗುವ ಭರವಸೆಯಿದೆ. ಒಂದೊಳ್ಳೆ ವಿಶ್ವದರ್ಜೆಯ ಸಿನಿಮಾ ಮಾಡುವ ತಂಡ ಜತೆಗಿರುವುದು ಖುಷಿ ನೀಡಿದೆ. - ರಾಜವರ್ಧನ್​, ನಾಯಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net