ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಮ್ಯಾನರೀಸಂ, ಚಾಪು ಮೂಡಿಸಿರುವ 'ನವರಸ' ನಾಯಕ ಜಗ್ಗೇಶ್, ತಮ್ಮ ಸಿನಿ ಪಯಣದ ಜೊತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ದೇವರ ಮೇಲೆ ಅಪಾರ ನಂಬಿಕೆಯಿಟ್ಟಿರುವ ಜಗ್ಗೇಶ್, ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಸೂಪರ್ಹಿಟ್ 'ರಣಧೀರ' ಚಿತ್ರದಲ್ಲಿ 'ಸರಿಗಮಪ' ಪಾತ್ರಧಾರಿಗಳಲ್ಲಿ ಒಬ್ಬರಾಗಿ ಮಿಂಚಿದ್ದು ಇಂದಿಗೂ ಚಿತ್ರಪ್ರೇಮಿಗಳಿಗೆ ನೆನಪಿದೆ. ಅಂದು ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದ ಒಂದು ಘಟನೆ ಬಗ್ಗೆ ಹಿರಿಯ ನಟ ತಮ್ಮ ಮನದಾಳದ ಮಾತನ್ನು ಮುಕ್ತವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.