"ಲವ್ ಮಾಕ್ಟೇಲ್' ಮೊದಗ ಭಾಗ 2020ರ ಜ. 31ರಂದು ರಿಲೀಸ್ ಆಗಿತ್ತು. ಬಾಲಿವುಡ್ನಲ್ಲಿ ಜ.24ರಂದು ವರುಣ್ ಧವನ್, ಶ್ರದ್ಧಾ ಕಪೂರ್, ಪ್ರಭುದೇವ ನಟಿಸಿದ್ದ "ಸ್ಟ್ರೀಟ್ ಡಾನ್ಸರ್ 3ಡಿ' ಮತ್ತು ಜ. 31ರಂದು ಸ್ೈ ಅಲಿ ಖಾನ್, ಟಬು ನಟಿಸಿದ್ದ "ಜವಾನಿ ಜಾನೇಮನ್' ರಿಲೀಸ್ ಆಗಿದ್ದವು. ತೆಲುಗಿನಲ್ಲಿ ರವಿತೇಜ, ಪಾಯಲ್ ರಜಪುತ್, ನಭಾ ನಟೇಶ್ ನಟಿಸಿದ್ದ "ಡಿಸ್ಕೋ ರಾಜ', ತಮಿಳಿನಲ್ಲಿ "ಸೈಕೋ', "ದಗಾಲ್ಟಿ' ಸೇರಿ ನಾಲ್ಕೆ$ದು ಸಿನಿಮಾಗಳು, ಮಲಯಾಳಂನಲ್ಲಿ ಅರ್ಧ ಡಜನ್ ಚಿತ್ರಗಳು ರಿಲೀಸ್ ಆಗಿದ್ದವು. ಹಾಗೇ ಕನ್ನಡದಲ್ಲೂ "ಕಾಣದಂತೆ ಮಾಯವಾದನು', "ಡಿಂಗ', "ನಮೋ', "ರಾಮನ ಸವಾರಿ' ಸೇರಿ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಕರೊನಾ ಆತಂಕದ ನಡುವೆಯೂ "ಲವ್ ಮಾಕ್ಟೇಲ್' ಗೆಲುವಿನ ನಗು ಬೀರಿತ್ತು. ಇನ್ನು "ಲವ್ ಮಾಕ್ಟೇಲ್ 2' 2022ರ ಫೆ. 11ರಂದು ರಿಲೀಸ್ ಆಗಿತ್ತು. ಆಗ ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದ "ಗೆಹ್ರಾಯಿಯಾ', ರಾಜಕುಮಾರ್ ರಾವ್, ಭೂಮಿ ಅಭಿನಯದ "ಬಧಾಯಿ ದೋ', ತಮಿಳಿನಲ್ಲಿ ವಿಕ್ರಮ್ ನಟಿಸಿದ್ದ "ಮಹಾನ್', ವಿಷ್ಣು ವಿಶಾಲ್ ಅಭಿನಯದ "ಎಫ್ಐಆರ್' ಸೇರಿ ಐದಾರು ಚಿತ್ರಗಳು, ತೆಲುಗಿನಲ್ಲಿ ರವಿತೇಜ ನಟಿಸಿದ್ದ "ಖಿಲಾಡಿ', ಸಿದ್ದು ಅಭಿನಯದ "ಡಿಜೆ ಟಿಲ್ಲು', & ಮಲಯಾಳಂನಲ್ಲಿ "ಅರ್ಚನಾ 31 ನಾಟ್ಔಟ್', "ಫ್ರೀಡಂ ಫೈಟ್', ಮೋಹನ್ ಲಾಲ್ ನಟಿಸಿದ್ದ "ಆರಾಟ್ಟು' ರಿಲೀಸ್ ಆಗಿದ್ದವು. ಕನ್ನಡದಲ್ಲೂ ಅರ್ಜುನ್ ಸರ್ಜಾ ನಟಿಸಿದ್ದ "ಒಪ್ಪಂದ', "ಫೋರ್ ವಾಲ್ಸ್', "ರೌಡಿ ಬೇಬಿ' ಸೇರಿ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗಿದ್ದವು. ಅದೆಲ್ಲದರ ನಡುವೆಯೂ "ಲವ್ ಮಾಕ್ಟೇಲ್ 2' ಉತ್ತಮ ಕಲೆಕ್ಷನ್ ಮಾಡಿಕೊಂಡಿತ್ತು.