ಐಪಿಎಸ್ ಆಫೀಸರ್‌ನ ‘ಐಎಎಸ್’ ಹಾಡು-ಪಾಡು: ಪೊಲೀಸ್ ಅಧಿಕಾರಿ ಸಿರಿವೆನ್ನೆಲ ರಚಿಸಿ, ಹಾಡಿರುವ ರೈತ ಗೀತೆ

ನಾನು ಐಎಎಸ್ಸೂ ಅಲ್ಬಂ ಪೋಸ್ಟರ್
ನಾನು ಐಎಎಸ್ಸೂ ಅಲ್ಬಂ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಸ್ ಅಧಿಕಾರಿಯ ಹೊಸ ಜವಾಬ್ದಾರಿ
  • ರೈತ ಗೀತೆ ರಚಿಸಿ, ಧ್ವನಿಯಾದ ಅಧಿಕಾರಿ ಸಿರಿವೆನ್ನೆಲ
  • ನಾನು ಐಎಎಸ್ಸೂ ಮಗಾ ಹಾಡು ವೈರಲ್​
ಬೆಂಗಳೂರು: ವೃತ್ತಿಯಲ್ಲಿ ಐಪಿಎಸ್ ಅಧಿಕಾರಿ. ಪ್ರವೃತ್ತಿಯಲ್ಲಿ ಸಾಹಿತಿ, ಗಾಯಕರಾಗಿರುವ ತುಮಕೂರು ಮೂಲದ ಸಿರಿವೆನ್ನೆಲ ಹಂದ್ರಾಳರ ‘ನಾನು ಐಎಎಸ್ಸೂ ಮಗಾ’ ಅಲ್ಬಂ ಹಾಡು ಎಲ್ಲೆಡೆ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. 2021ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಿರಿವೆನ್ನೆಲ ಸದ್ಯ ಪಂಜಾಬ್‌ನ ಅಮೃತಸರದಲ್ಲಿ ಎಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ಒತ್ತಡದ ಮಧ್ಯೆಯೂ ಅವರು ದೇಶದ ಬೆನ್ನೆಲುಬು ರೈತನಿಗೆ ಹಾಡಿನ ಮೂಲಕ ಗೌರವ ಸಲ್ಲಿಸಿದ್ದಾರೆ. ಸ್ವತಃ ಅವರೇ ರಚಿಸಿ, ಹಾಡಿರುವುದು ವಿಶೇಷ. ಈ ಬಗ್ಗೆ ಸಿರಿವೆನ್ನೆಲ, ‘ಚಿಕ್ಕಂದಿನಿಂದಲೂ ರೈತರ ಕಷ್ಟಗಳನ್ನು ನೋಡಿ ಅರಿತಿದ್ದೇನೆ. ಪ್ರಸ್ತುತ ರೈತರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಹಾಗಾಗಿ, ಅವರಿಗೂ ಸಮಾಜದಲ್ಲಿ ಗೌರವ-ಘನತೆ ಸಿಗಬೇಕು ಎಂಬ ಉದ್ದೇಶದಿಂದ ಈ ಅಲ್ಬಂ ಮಾಡಿದೆ. ಇಲ್ಲಿ ಐಎಎಸ್ ಅಂದರೆ, ‘ಇಂಡಿಯನ್ ಅಗ್ರಿಕಲ್ಚರ್ ಸರ್ವಿಸ್’ ಅಂತ. ಇಡೀ ದೇಶಕ್ಕೆ ಅನ್ನ ಹಾಕುವ ರೈತರು ಯಾವ ಅಧಿಕಾರಿಗಳಿಗೂ ಕಡಿಮೆ ಅಲ್ಲ ಎಂಬುದನ್ನು ಅಭಿವ್ಯಕ್ತಪಡಿಸಿದ್ದೇನೆ. ವೃತ್ತಿಯಲ್ಲಿ ಐಪಿಎಸ್ ಆದರೂ, ನನಗೆ ಸಾಹಿತ್ಯ, ಸಂಗೀತದ ಮೇಲೆ ಒಲಿವಿದೆ. ನಮ್ಮದು ಕೃಷಿಕ ಕುಟುಂಬ ಆಗಿರುವ ಕಾರಣ ಈ ಪ್ರಯತ್ನ ಮಾಡಿದೆ. ನಾಲ್ಕು ವರ್ಷದ ಹಿಂದೆಯೇ ಈ ಹಾಡು ರಚಿಸಿದ್ದೆ. ಆದರೆ, ತುಂಬಾ ಕಾಡಿದ ಬಳಿಕ ವಿಡಿಯೋ ಸಾಂಗ್ ಮಾಡಿದೆ. ಒಂದೇ ದಿನದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮೊಬೈಲ್ ಮೂಲಕ ಶೂಟ್ ಮಾಡಿರುವುದು ವಿಶೇಷ’ ಎಂದು ಮಾಹಿತಿ ನೀಡಿದರು. ಈ ವಿಡಿಯೋ ಸಾಂಗ್ ಆನಂದ್ ರಾಜ್‌ವಿಕ್ರಮ್ ಸಂಗೀತ ಸಂಯೋಜಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net