ಜೂನ್​ನಲ್ಲಿ ಸೌತ್​ ಸಿನಿಮಾ ಹವಾ; 'ಪೆದ್ದಿ', ಮ್ಯಾಂಗೋ ಪಚ್ಚಾ ಸೇರಿದಂತೆ ಮುಂಗಾರಿನಲ್ಲಿ ರಿಲೀಸ್ ಆಗ್ತಿರೋ 8 ಚಿತ್ರಗಳಿವು..South Indian Movies

South Indian Movies Releasing June 2026
South Indian Movies Releasing June 2026
Published on

ಪ್ರಮುಖ ಮುಖ್ಯಾಂಶಗಳು

  • ರಾಮ್ ಚರಣ್ ಅವರ 'ಪೆದ್ದಿ', ಸಮಂತಾ ಅವರ 'ಮಾ ಇಂಟಿ ಬಂಗಾರಂ' ಸಿನಿಮಾ ಜೂನ್​ನಲ್ಲಿ ರಿಲೀಸ್
  • ಮ್ಯಾಂಗೋ ಪಚ್ಚಾ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಿಚ್ಚ ಸುದೀಪ್ ಸೋದರಳಿಯ ಎಂಟ್ರಿ
  • 'ಸಿಂಗ್ ಗೀತಂ' ಮತ್ತು ಕೇನ್ಸ್​ನಲ್ಲಿ ಪ್ರದರ್ಶನ ಕಂಡ ಮಲಯಾಳಂನ 'ಬಾಲನ್ ದಿ ಬಾಯ್' ಚಿತ್ರ ತೆರೆಗೆ
South Indian Movies Releasing June 2026 2026ರ ಶೈಕ್ಷಣಿಕ ವರ್ಷವಾದ ಜೂನ್​ನಲ್ಲಿ ಸೌತ್​ ಇಂಡಿಯಾ ಸಿನಿಮಾಗಳು ಬೆಳ್ಳಿ ತೆರೆ ಮೇಲೆ ಧೂಳೆಬ್ಬಿಸಲು ರೆಡಿಯಾಗಿವೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ 8 ಅತ್ಯಂತ ನಿರೀಕ್ಷಿತ ಚಿತ್ರಗಳು ಸಿನಿ ಪ್ರೇಮಿಗಳು ರಂಜಿಸಲು ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಮ್ ಚರಣ್ ಅಭಿನಯದ ‘ಪೆದ್ದಿ’ಯಿಂದ ಹಿಡಿದು, ಸಮಂತಾ ಅವರ ‘ಮಾ ಇಂಟಿ ಬಂಗಾರಂ’ ಹಾಗೂ ಸ್ಯಾಂಡಲ್‌ವುಡ್‌ಗೆ ಕಿಚ್ಚ ಸುದೀಪ್ ಸೋದರ ಸಂಬಂಧಿ ಸಂಚಿತ್ ಗ್ರ್ಯಾಂಡ್ ಎಂಟ್ರಿ ಕೊಡಲಿರುವ ‘ಮ್ಯಾಂಗೋ ಪಚ್ಚಾ’ ಸೇರಿದಂತೆ ಒಟ್ಟು 8 ಪ್ರಮುಖ ಸೌತ್ ಸಿನಿಮಾಗಳು ರಸದೌತಣ ನೀಡಲಿವೆ.
ಜನವರಿಯಿಂದ ಇಲ್ಲಿಯವರೆಗೂ ದಕ್ಷಿಣ ಭಾರತದ ಸಿನಿಮಾಗಳಾದ 'ಮನ ಶಂಕರ ವರ ಪ್ರಸಾದ್ ಗಾರು', 'ಅನಗನಗ ಒಕ ರಾಜು', ಏಕಂ, ತಾಯ್​ ಕಿರವಿ, ಯೂತ್', LIK, ಭರತನಾಟ್ಯಂ 2: ಮೋಹಿನಿಯಾಟ್ಟಂ', ಕೆಡಿ, ಲವ್​ ಮಾಕ್​ಟೇಲ್​, ಲ್ಯಾಂಡ್​ ಲಾರ್ಡ್​, ಪರಾಸಕ್ತಿ,  'ಕರುಪ್ಪು'  ಬೆಳ್ಳಿ ತೆರೆ ಮೇಲೆ ಧೂಳೆಬ್ಬಿಸಿದ್ದವು. ಇನ್ನು ವರ್ಷದ ದ್ವಿತೀಯಾರ್ಧ ಸ್ಟಾರ್​ ನಟರ ಸಿನಿಮಾಗಳು ತೆರೆ ಮೇಲೆ ಮೂಡಲಿವೆ. 

ಜೂನ್​ನಲ್ಲಿ ರಿಲೀಸ್ ಆಗಲಿರುವ ಸಿನಿಮಾವಿದು

  • ಪೆದ್ದಿ (ತೆಲುಗು) ಬಿಡುಗಡೆ 
  • ದಿನಾಂಕ: 4 ಜೂನ್  2026
ಬುಚ್ಚಿಬಾಬು ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ಘಟಾನುಘಟಿ ತಾರೆಯರು  ಬಣ್ಣ ಹಚ್ಚಿದ್ದಾರೆ. ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಿವುಡ್​ ನಟಿ ಜಾನ್ವಿ ಕಪೂರ್​, , ಜಗಪತಿ ಬಾಬು ಮತ್ತು ದಿವ್ಯೇಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 1980ರ ದಶಕದ  ಆಂಧ್ರಪ್ರದೇಶದ ಗ್ರಾಮೀಣ ಭಾಗದ ಕ್ರೀಡೆಯ ಕತೆ, ಹಳ್ಳಿ ಸೊಗಡನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.  ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.
  • ಪರಿಮಳಾ ಆಂಡ್ ಕೋ (ತಮಿಳು) 
  • ಬಿಡುಗಡೆ ದಿನಾಂಕ: 2026 ಜೂನ್ 5
ಪರಿಮಳಾ ಆಂಡ್ ಕೋ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಪಾಂಡಿರಾಜ್  ನಿರ್ದೇಶಿಸಿದ್ದು, ಜಯರಾಮ್ ಮತ್ತು ಊರ್ವಶಿ  ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕಾಮಿಡಿ ಎಂಟರ್​ಟೈನರ್​ ಚಿತ್ರವಾಗಿದ್ದು ಕೃಷ್ಣಮೂರ್ತಿ, ಅನಂತಿಕಾ ಸನಿಲ್ ಕುಮಾರ್, ಯೋಗಿ ಬಾಬು, ಸ್ಯಾಂಡಿ, ಮಿಸ್ಕಿನ್ ಮತ್ತು ಪೂರ್ಣಿಮಾ ರವಿ ಬಣ್ಣ ಹಚ್ಚಿದ್ದಾರೆ. ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಕೊಲೆ ಮತ್ತು ಅದರ ರಹಸ್ಯದ ಸುತ್ತ ಈ ಸಿನಿಮಾ ಇರಲಿದೆ. 
  • ಮಾಲಿವುಡ್ ಟೈಮ್ಸ್ (ಮಲಯಾಳಂ)
  • ಬಿಡುಗಡೆ ದಿನಾಂಕ: 5 ಜೂನ್ 2026
ಅಭಿನವ್ ಸುಂದರ್ ನಾಯಕ್ ನಿರ್ದೇಶನದ ಮಾಲಿವುಡ್ ಟೈಮ್ಸ್  ಸಿನಿಮಾ ಜೂನ್​ 5ರಂದು ರಿಲೀಸ್ ಆಗಲಿದೆ. ನಸ್ಲೆನ್ ಕೆ. ಗಫೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಮಿಂಗ್-ಆಫ್-ಏಜ್ ಕಾಮಿಡಿ-ಡ್ರಾಮಾ ಚಿತ್ರ. ಸಣ್ಣ ಹಳ್ಳಿಯೊಂದರ 11ನೇ ತರಗತಿ ವಿದ್ಯಾರ್ಥಿ ವಿನೀತ್ ಮಾಧವನ್, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂದು ಕಾಣುವ ಕನಸಿನ ಸುತ್ತ ಈ ಕಥೆ ಇದೆ. 
  • ಮ್ಯಾಂಗೋ ಪಚ್ಚಾ (ಕನ್ನಡ)
  •  ಬಿಡುಗಡೆ ದಿನಾಂಕ: ಜೂನ್ 5, 2026
ವಿವೇಕ್​ ನಿರ್ದೇಶನದ ಮ್ಯಾಂಗೋ ಪಚ್ಚಾ ಸಿನಿಮಾವು ಜೂನ್ 5 ರಂದು ರಿಲೀಸ್ ಆಗಲಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ, ಈ ಆಕ್ಷನ್ ಮತ್ತು ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದೆ. . 2001 ರಿಂದ 2011 ರ ನಡುವಿನ ಮೈಸೂರಿನ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. 
  • ಚಿತ್ರ:  ಸಿಂಗ್ ಗೀತಂ (ತೆಲುಗು)
  •  ಬಿಡುಗಡೆ ದಿನಾಂಕ: 11 ಜೂನ್ 2026
  • ನಿರ್ಮಾಪಕ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಮತ್ತು  'ಕಲ್ಕಿ' ಖ್ಯಾತಿಯ  ನಾಗ್ ಅಶ್ವಿನ್ ನಿರ್ಮಾಣದ ಸಿಂಗ್ ಗೀತಂ  ಸಿನಿಮಾ ಜೂನ್​ 11ರಂದು ರಿಲೀಸ್ ಆಗಲಿದೆ.  ಚಿತ್ರದಲ್ಲಿ ಅಹಲ್ಯಾ ಬಮ್ರೂ, ಹೊಸ ನಟ ಅಯಾನ್ ಕೆ. ಮತ್ತು ಶಾಲಿನಿ ಕೊಂಡೆಪುಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
  • ಚಿತ್ರ:ಮಾ ಇಂಟಿ ಬಂಗಾರಂ (ತೆಲುಗು) 
  • ಬಿಡುಗಡೆ ದಿನಾಂಕ:  19 ಜೂನ್ 2026
ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದ ಮಾ ಇಂಟಿ ಬಂಗಾರಂ ಸಿನಿಮಾ  ಜೂನ್ 19ರಂದು ರಿಲೀಸ್​ ಆಗಲಿದೆ. ಸಮಂತಾ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಸ್ಯಾಂಡಲ್​ವುಡ್ ನಟ​​ ದೂದ್​ ಪೇಡ ದಿಗಂತ್​ ಅವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.  ಈ ಸಿನಿಮಾ ಮೇ ಮಾಸದಲ್ಲೇ ರಿಲೀಸ್ ಆಗಬೇಕಿತ್ತು. ಆದರೆ  ಐಪಿಎಲ್ ಸೀಸನ್ ಕಾರಣದಿಂದಾಗಿ  ಮುಂದೂಡಲ್ಪಟ್ಟಿದೆ. ಸ್ಪೈ ಥ್ರಿಲ್ಲರ್ ಸಿನಿಮಾ ಎಂದು ಕೊಂಡಿದ್ದ ಸಮಂತಾ ಅಭಿಮಾನಿಗಳಿಗೆ ಇದೊಂದು ಕೌಟುಂಬಿಕ ಚಿತ್ರ  ನಂದಿನಿ ಅವರು ಸ್ಪಷ್ಟನೆಕೊಟ್ಟಿದ್ದಾರೆ
  • ಬಾಲನ್ ದಿ ಬಾಯ್ (ಮಲಯಾಳಂ)
  •  ಬಿಡುಗಡೆ ದಿನಾಂಕ: 19 ಜೂನ್  2026
 'ಮಂಜುಮ್ಮಲ್ ಬಾಯ್ಸ್' ಖ್ಯಾತಿಯ ಚಿದಂಬರಂ ನಿರ್ದೇಶನದ ಮತ್ತು 'ಆವೇಶಂ' ಖ್ಯಾತಿಯ ಜಿತು ಮಾಧವನ್ ಬರೆದಿರುವ ಭಾವುಕ ಡ್ರಾಮಾ ಚಿತ್ರವಿದು. ಕಷ್ಟಕರವಾದ ಬಾಲ್ಯವನ್ನು ಎದುರಿಸುತ್ತಾ, ಕಾಣೆಯಾದ ತನ್ನ ತಾಯಿಯನ್ನು ಹುಡುಕುವ ಹದಿಹರೆಯದ ಹುಡುಗನ ಕಥೆಯನ್ನು ಇದು ಒಳಗೊಂಡಿದೆ. ಈ ಚಿತ್ರವು ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿದೆ.
  • ಲೆನಿನ್ (ತೆಲುಗು)
  • ಬಿಡುಗಡೆ ದಿನಾಂಕ: 26 ಜೂನ್  2026
 ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ ಲೆನಿನ್ ಸಿನಿಮಾ ಜೂನ್​ 26ರಂದು ರಿಲೀಸ್ ಆಗಲಿದೆ.  ಅಕ್ಕಿನೇನಿ ಅಖಿಲ್  ನಾಯಕ ನಟನಾಗಿದ್ದು ಕಾಂತ ಸಿನಿಮಾ ಖ್ಯಾತಿಯ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿದ್ದಾರೆ.  ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಜಂಟಿಯಾಗಿ ನಿರ್ಮಿಸಿವೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net