418 Trailer - ಕನ್ನಡಿಗ ಕೀರ್ತನ್​ ನಾಡಗೌಡ ನಿರ್ದೇಶನದ ಹಾರರ್​ ಸಸ್ಪೆನ್ಸ್​ ಥ್ರಿಲ್ಲರ್​

ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಗರಡಿಯಲ್ಲಿ "ಉಗ್ರಂ', "ಕೆಜಿಎಫ್​' ಸರಣಿಯಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಕೀರ್ತನ್​ ನಾಡಗೌಡ ಇದೀಗ ಮೊದಲ ಬಾರಿಗೆ ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ. ಹೆಸರು "418'. ಇದೊಂದು ಹಾರರ್​ ಥ್ರಿಲ್ಲರ್​ ಚಿತ್ರವಾಗಿದ್ದು ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಟ್ರೇಲರ್​ ವೀಕ್ಷಕರನ್ನು ಹೆದರಿಸುವಲ್ಲಿ ಸಕ್ಸಸ್​ ಆಗಿದೆ.
418 ಚಿತ್ರದ ಪೋಸ್ಟರ್
418 ಚಿತ್ರದ ಪೋಸ್ಟರ್
Published on: 

ಬೆಂಗಳೂರು:

ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಗರಡಿಯಲ್ಲಿ "ಉಗ್ರಂ', "ಕೆಜಿಎಫ್​' ಸರಣಿಯಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಕೀರ್ತನ್​ ನಾಡಗೌಡ ಇದೀಗ ಮೊದಲ ಬಾರಿಗೆ ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ. ಹೆಸರು "418'. ಇದೊಂದು ಹಾರರ್​ ಥ್ರಿಲ್ಲರ್​ ಚಿತ್ರವಾಗಿದ್ದು ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಟ್ರೇಲರ್​ ವೀಕ್ಷಕರನ್ನು ಹೆದರಿಸುವಲ್ಲಿ ಸಕ್ಸಸ್​ ಆಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ತೆಲುಗಿನ ಮೈತ್ರಿ ಮೂವಿ ಮೇಕರ್ಸ್​ ನಿರ್ಮಿಸಿದ್ದು, ಪ್ರಶಾಂತ್​ ನೀಲ್​ ಪ್ರಸ್ತುತಪಡಿಸುತ್ತಿದ್ದಾರೆ. ಚೈತ್ರಾ ಜೆ. ಆಚಾರ್​, ಸೂರ್ಯ ಗಣೇಶ್​, ರಮೇಶ್​ ಇಂದಿರ, ಶ್ರೀಕಾಂತ್​ ಗಣೇಶ್​, ಚರಣ್​, ಪ್ರೀತಿ, ಶಶಾಂಕ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "418' ಇದೇ 23ರಂದು ತೆರೆಗೆ ಬರಲಿದೆ. ನಿರ್ದೇಶಕ ಕೀರ್ತನ್​, ""418' ಸೇರಿಸಿದರೆ 13 ಆಗುತ್ತದೆ. ಅದನ್ನು ಅನ್​ಲಕ್ಕಿ ನಂಬರ್​ ಎನ್ನುತ್ತಾರೆ. ಅದರ ಬಗ್ಗೆಯೂ ಚಿತ್ರದಲ್ಲಿ ಅಂಶಗಳಿರುವ ಕಾರಣ ಶೀರ್ಷಿಕೆ ಮಾಡಿಕೊಂಡೆವು. "ಕೆಜಿಎಫ್​​' ಸಮಯದಲ್ಲೇ ಹೊಳೆದ ಕಥೆಯಿದು. ಆದರೆ, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬಿಜಿಯಿದ್ದ ಕಾರಣ "ಸಲಾರ್​' ಬಳಿಕ ಪೂರ್ಣಗೊಳಿಸಿ, ಪ್ರಶಾಂತ್​ಗೆ ಕಥೆ ಹೇಳಿದೆ. ಅವರು ಇಷ್ಟಪಟ್ಟರು. ಕಳೆದ ನವೆಂಬರ್​ನಲ್ಲಿ ಶೂಟಿಂಗ್​ ಪ್ರಾರಂಭಿಸಿದೆವು. ಇದೀಗ ರಿಲೀಸ್​ಗೆ ರೆಡಿಯಾಗಿದೆ. ಕಥೆ ಬರೆಯುವಾಗಲೇ ಚೈತ್ರಾ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ "ದೇವಿಕಾ' ಪಾತ್ರ ಸೃಷ್ಟಿಸಿದ್ದೆ. ಅವರಿಗೂ ಇಷ್ಟವಾದ ಕಾರಣ ಒಪ್ಪಿಕೊಂಡರು. ಆಡಿಷನ್​ ಮೂಲಕ ಕೆಲ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡೆವು. ಇದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಥೆ' ಎಂದು ಮಾಹಿತಿ ನೀಡುತ್ತಾರೆ.

ಪ್ರಶಾಂತ್ ನೀಲ್ ಜತೆ ಕೀರ್ತನ್ ನಾಡಗೌಡ
ಪ್ರಶಾಂತ್ ನೀಲ್ ಜತೆ ಕೀರ್ತನ್ ನಾಡಗೌಡ

ಕಂಪ್ಲೀಟ್​ ಹಾರರ್​ ಧಮಾಕಾ

"ಕಾಮಿಡಿ ಹಾರರ್​ ಚಿತ್ರಗಳು ಬಂದಿವೆ. ಆದರೆ, ಪೂರ್ಣ ಪ್ರಮಾಣದ ಸೀರಿಯಸ್​ ಹಾರರ್​ ಸಿನಿಮಾಗಳು ಬಂದು ತುಂಬ ವರ್ಷಗಳಾಗಿವೆ. ಹಾರರ್​ ಜಾನರ್​ಗೆ ಅದರದೇ ಆದ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ "ವಿಡಿಯೋ' ವರ್ಕ್​ ಆಗಿದೆ' ಎನ್ನುವ ಕೀರ್ತನ್​, "ನಾನು ಹಾರರ್​ ಜಾನರ್​ ಅಭಿಮಾನಿ, ಒಬ್ಬ ಅಭಿಮಾನಿ ಸಿನಿಮಾ ಹೇಗಿರಬೇಕು ಅಂತ ಬಯಸುತ್ತಾನೋ, ಅದನ್ನೇ ಮನಸ್ಸಿಟ್ಟುಕೊಂಡು ಮಾಡಿರುವ ಚಿತ್ರ "418'. ಹಾರರ್​ಗೆ ಭಾಷೆಯ ಗಡಿಯಿಲ್ಲ. ಭಯ ಎಂಬುದು ಎಲ್ಲ ಭಾಷೆಗಳಲ್ಲೂ ಒಂದೇ. ಹೀಗಾಗಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್​ ಮಾಡುತ್ತಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net