ʼಉಗ್ರಂ' ಚಿತ್ರಕ್ಕೆ ದಶಕದ ಸಂಭ್ರಮ; ಭಾವನಿಗೆ ಸಿನಿಮಾವನ್ನೇ ವರದಕ್ಷಿಣೆಯಾಗಿ ಕೊಟ್ಟ ಬಾಮೈದ ಪ್ರಶಾಂತ್ ನೀಲ್

prashanth neel
Published on

ಬೆಂಗಳೂರು: ಪ್ರಶಾಂತ್ ನೀಲ್ ಈಗ ಸ್ಟಾರ್ ಡೈರೆಕ್ಟರ್. ಆದರೆ ಇದೇ ನೀಲ್ ಮೊದಲ ಹೆಜ್ಜೆಯಲ್ಲಿ ಅದೆಷ್ಟು ಸವಾಲು ಎದುರಿಸಿದ್ರು ಅನ್ನೋದು ಕೆಲವರಿಗೆ ಗೊತ್ತಿರಲಿಲ್ಲ.  ಪ್ರಶಾಂತ್ ನೀಲ್ ನಿರ್ದೆಶನದ ಶ್ರೀ ಮುರುಳಿ ಅಭಿನಯದ  ಉಗ್ರಂ ಚಿತ್ರಕ್ಕೆ ದಶಕದ ಸಂಭ್ರಮ.  ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಉಗ್ರಂ ಹಿಂದಿನ ಕುರಿತು ಮನ ಬಿಚ್ಚಿದ್ದಾರೆ.  

ಇಂದಿಗೂ ಉಗ್ರಂ ಬಿಗ್ಗೆಸ್ಟ್ ಟೀಚರ್ ಆಫರ್ ಮೈ ಲೈಫ್. ತಾಳ್ಮೆ-ಹಠ-ಛಲ ಉಗ್ರಂ ಆಯ್ತು. ಶ್ರೀಮುರಳಿಗೆ  ಗೆಲ್ಲಲೇಬೇಕಾದ ಅನಿವಾರ್ಯತೆ. ಪ್ರಶಾಂತ್ ನೀಲ್‌ಗೆ ಗೆಲ್ಲುವ ಹುಚ್ಚು. ಆಗ ಸೃಷ್ಟಿಯಾಗಿದ್ದೇ ಉಗ್ರಂ ಎನ್ನುತ್ತಾರೆ ನೀಲ್. ಪ್ರಶಾಂತ್ ನೀಲ್ ಸಹೋದರಿಯನ್ನ ಶ್ರೀಮುರಳಿ ಮದುವೆಯಾಗಿದ್ದಾರೆ. ಅದಕ್ಕೆ ತಮಾಷೆಯಿಂದ, `ವರದಕ್ಷಿಣಿ ಕೊಟ್ಟಿರಲಿಲ್ಲ. ಹೀಗಾಗಿ ಸಿನಿಮಾ ಮಾಡ್ಕೊಟ್ಟೆ’ ಎನ್ನುತ್ತಾ ಉಗ್ರಂ ಮೆಲಕು ಹಾಕಿದ್ದಾರೆ ನೀಲ್.

 ಭಾವ- ಬಾಮೈದ ಪ್ರಶಾಂತ್ ನೀಲ್-ಶ್ರೀಮುರಳಿ ಉಗ್ರಂ ಚಿತ್ರಿಸಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ್ರು. ಹೊಸ ತಂತ್ರಜ್ಞಾನವನ್ನ ಕನ್ನಡಕ್ಕೆ ಪರಿಚಿಯಿಸಿರುವ ಉಗ್ರಂ ಆ ಸಮಯದಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸಲಿಲ್ಲ. ಆದರೆ ಈಗ  ಉಗ್ರಂ ಸಿನಿಮಾವಾಗಿ 10 ವರ್ಷ  ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net