ಕರ್ನಾಟಕದಿಂದ ಮುಂಬೈಗೆ ಸೊಸೆಯಾಗಿ ತೆರಳಿದ್ದಾರೆ: ಒಗಟು ಮಾತು ಬಿಡಿಸಿ ಹೇಳಿದ ಪ್ರಶಾಂತ್​ ಸಂಬರಗಿ!

Sambaragi
Published on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಮಾದಕ ಜಾಲದ ನಂಟಿದೆ ಎಂದು ಗಂಭೀರ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಇಂದು ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿರುವ ಸಂಬರಗಿ, ಇಂದು ಹತ್ತು ಗಂಟೆಗೆ ಸಿಸಿಬಿ ಕಚೇರಿಗೆ ಹೋಗುತ್ತೇನೆಂದರು. ಮುಂದುವರಿದು ಮಾತನಾಡಿದ ಅವರು ನನ್ನ ಪ್ರಶ್ನೆ ಒಂದೇ 2019ರ ಜೂನ್​ 8, 9 ಮತ್ತು 10 ರಂದು ಜಮೀರ್ ಅಹ್ಮದ್ ಎಲ್ಲಿದ್ದರು. ಮಾನ್ಯ ಶಾಸಕರಾದ ಆಗಿನ ಕಾಲದ ಕ್ಯಾಬಿನೆಟ್ ಸದಸ್ಯನಾಗಿದ್ದ ಜಮೀರ್ ಕೊಲೊಂಬೋಗೆ ಯಾಕೆ ಹೋಗಿದ್ರು? ಯಾರ ಜೊತೆ ತೆರಳಿದ್ರು? ಎಂದು ಪ್ರಶ್ನಿಸಿದರು.

ಸಂಜನಾ ಜತೆ ಹೊಗಿದ್ದರು ಮತ್ತು ಡ್ರಗ್ಸ್​ ಜತೆ ಲಿಂಕ್ ಇದೆ ಎಂದು ಹೇಳಿಲ್ಲ. ಆ ಮೂರು ದಿನ ಎಲ್ಲಿಗೆ ಹೋಗಿದ್ರೂ ಅನ್ನೋದು ಮಾತ್ರ ಕೇಳಿದ್ದೆ. ಚಾಮರಾಜ ಪೇಟೆಯಲ್ಲಿ ಬೇರೆ ಧರ್ಮದವರು ಇದ್ದಾರೆ. ಅಲ್ಪಸಂಖ್ಯಾತರೂ ಅನ್ನೋ ಮಾತು ಹೇಳಿ ದೂರು ದಾಖಲಿಸಿದ್ದಾರೆ. ನಮಗೆ ಬೇಕಾಗಿರೋದು ಗ್ಯಾಂಬ್ಲಿಂಗ್ ಹಾಗೂ ಡ್ರಗ್ಸ್ ಬಗೆಗಿನ ಮಾಹಿತಿ. ಈ ವಿಚಾರದಲ್ಲಿ ನಾನು ಹಿಟ್ ಆ್ಯಂಡ್ ರನ್ ಮಾಡೋದಿಲ್ಲ. ನನ್ನ ಬಳಿ ಸಾಕ್ಷ್ಯಾಧಾರ ಇಲ್ಲದೆ ಮಾಹಿತಿ ಹೇಳೋದಕ್ಕೆ ಸಾಧ್ಯಾನಾ? ಎನ್ನುವ ಮೂಲಕ ಪರೋಕ್ಷವಾಗಿ ನನ್ನ ಬಳಿ ಸ್ಪೋಟಕ ಮಾಹಿತಿಯಿದೆ ಎಂದರು.

ಈ ಹಿಂದೆ ನಾನು ಐದು ಸ್ಪೋಟಕ ಮಾಹಿತಿ ಒಗಟಾಗಿ ಹೇಳಿದ್ದೆ ಅದೆಲ್ಲವೂ ಸತ್ಯವಾಗಿದೆ. ಮೊದಲನೆಯದಾಗಿ ಕರ್ನಾಟಕದಿಂದ ಮುಂಬೈಗೆ ಸೊಸೆಯಾಗಿ ಒಬ್ಬರು ತೆರಳಿದ್ದಾರೆ ಎಂದಿದ್ದೆ. ಜೀವರಾಜ್ ಆಳ್ವಾ ಮಗ ಆದಿತ್ಯಾ ಆಳ್ವಾ ವಿರುದ್ಧ ದೂರು ದಾಖಲಾಗಿದೆ. ಇವರ ಮನೆ ಮಗಳು ಮುಂಬೈನ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಇದನ್ನ ನಾನು ಒಗಟಾಗಿ ಹೇಳಿದ್ದೆ.

ಎರಡನೆಯದಾಗಿ ಎನ್​ಸಿಬಿಯಿಂದ ಬಿಬಿಎಂಪಿ ಕೇಶವ್​ ಮೂರ್ತಿ ಮಗನಿಗೆ ನೋಟಿಸ್ ನೀಡಿದ್ದಾರೆ. ಅದನ್ನೂ ಕೂಡ ಹೇಳಿದ್ದೆ. ಮೂರನೆಯದಾಗಿ ಬಾಲಿವುಡ್​ಗೂ ಸ್ಯಾಂಡಲ್​ವುಡ್​ಗೂ ಸಂಬಂಧ ಇದೆ ಅದರಲ್ಲಿ ಇಮ್ತಿಯಾಸ್ ಖಾತ್ರಿ ಇದ್ದಾನೆಂದು ಹೇಳಿದ್ದೆ. ನನ್ನ ಆಪಾದನೆಗಳೆಲ್ಲವೂ ಸತ್ಯವಾಗಿದೆ. ಇನ್ನುಳಿದ ಎರಡು ವಿಷಯಗಳು ಸಹ ಮುಂದಿನ ದಿನಗಳಲ್ಲಿ ಸ್ಪೋಟಗೊಳ್ಳತ್ತದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net