‘ಮಾಲ್​’ನಿಂದ ದೀಪಿಕಾ ಬಣ್ಣ ಬಯಲಾಯ್ತು; ಮಾಳವಿಕಾ ಅವಿನಾಶ್​

collage (16)
Published on

ಬೆಂಗಳೂರು: ಬಾಲಿವುಡ್​ನಲ್ಲಿ ಭುಗಿಲೆದ್ದಿರುವ ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ಶನಿವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಸಾರಾ ಅಲಿಖಾನ್​, ರಾಕುಲ್​ ಪ್ರೀತ್​ ಸಿಂಗ್​, ಶ್ರದ್ಧಾ ಕಪೂರ್​ ಸಹ ವಿಚಾರಣೆ ಎದುರಿಸಲಿದ್ದಾರೆ. ಇದೀಗ ಈ ಎಲ್ಲ ಬೆಳವಣಿಗೆಗಳ ಬಗ್ಗೆ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್​ ಪ್ರತಿಕ್ರಿಯಿಸಿದ್ದಾರೆ.

‘ನಿಮಗೆಲ್ಲರಿಗೂ ಗೊತ್ತಿರುವಂತೆ, ಖಿನ್ನತೆ ಎನ್ನುವ ಕಥೆ ಕಟ್ಟಿ ಅದರ ಮೂಲಕ ಸಾಮಾಜಿಕ ಕಳಕಳಿಯ ಪ್ರಚಾರ ಪಡೆದ ದೀಪಿಕಾ, ಇದೀಗ ಆ ಮಾಲ್​ ಎಂಬ ಹೊಗೆ ಅವರನ್ನೇ ಆವರಿಸಿದೆ. ಅವಳನ್ನೇ ರೋಲ್​ ಮಾಡೆಲ್​ ಎಂದು ಹಿಂಬಾಲಿಸುತ್ತಿರುವವರಿಗೆ ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಟ್ವೀಟ್​ ಮಾಡಿದ್ದಾರೆ.

ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಖಿನ್ನತೆಯೂ ಮುಖ್ಯ ಕಾರಣ ಎಂದು ತಿಳಿಯುತ್ತಿದ್ದಂತೆ, ಆ ಬಗ್ಗೆ ದೀಪಿಕಾ ಪಡುಕೋಣೆ ಮಾತನಾಡಿದ್ದರು. ತಾವು ಆ ಖಿನ್ನತೆಯನ್ನು ಎದುರಿಸಿದ ಹಿನ್ನೆಲೆ ಮತ್ತು ಅದರಿಂದ ಆಚೆ ಬರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಲಹೆ ನೀಡಿದ್ದರು. ಇದೀಗ ಅದೇ ವಿಚಾರ ದೀಪಿಕಾ ಉರುಳಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net