VIDEO: ಕಚ್ಚಿ ಕಚ್ಚಿ ತಿನ್ನಲಾ.. ಚುಚ್ಚಿ ಚುಚ್ಚಿ ಕೊಲ್ಲಲಾ.. ಅಂತಿದ್ದಾರೆ ಹರಿಪ್ರಿಯಾ!

haripr
Published on

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾಕ್ಷೇತ್ರದ ಕೆಲಸಗಳು ಬಹುತೇಕ ಕಳೆಗುಂದಿವೆ. ಈಗೀಗ ಲಾಕ್​ಡೌನ್​ ಕೊಂಚ ಸಡಿಲ ಆಗುತ್ತಿದ್ದಂತೆ​ ಕೆಲಸಗಳು ಮತ್ತೆ ಶುರು ಆಗಿವೆ. ಆದರೂ ಇನ್ನೂ ಒಂದಷ್ಟು ಮಂದಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಓದು, ಅಡುಗೆ, ಬರವಣಿಗೆ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಅದೇ ರೀತಿ ನಟಿ ಹರಿಪ್ರಿಯಾ ಬರವಣಿಗೆ ಕಡೆಯೇ ಹೆಚ್ಚು ಒತ್ತು ನೀಡಿದ್ದಾರೆ. ಆಗಾಗ ಅವರ ಅನುಭವಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. ವಿಡಿಯೋಗಳನ್ನೂ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಹೌದು, ಮಾವಿನ ಕಾಯಿ ತಿನ್ನುವ ವಿಡಿಯೋವೊಂದನ್ನು ಹರಿಪ್ರಿಯಾ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕಚ್ಚಿ ಕಚ್ಚಿ ನಿನ್ನ ತಿನ್ನಲಾ, ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲಾ ಎಂಬ ಹಾಡನ್ನು ಅಳವಡಿಸಿದ್ದಾರೆ. ಹಾಡಿಗೆ ತಕ್ಕಂತೆ ಹರಿಪ್ರಿಯಾ ಅವರ ಹಾವ ಭಾವ ಸಹ ಅಷ್ಟೇ ಮಜವಾಗಿದೆ. ಆ ಪುಟಾಣಿ ಹಾಡಿನ ತುಣುಕು ಇಲ್ಲಿದೆ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net