

ಬೆಂಗಳೂರು: ಬೆಂಗಳೂರಿನ ಆನೇಕಲ್ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಚಿತ್ರರಂಗದ ನಟ ಶರತ್ ಲೋಹಿತಾಶ್ವ, ಸ್ಪಂದನ ಅವರ ನಿಧನದ ಸುದ್ದಿ ನನಗೆ ಬಹಳ ದುಃಖ ತರಿಸಿದೆ ಎಂದು ಹೇಳಿದರು.
"ಇತ್ತೀಚಿನ ಘಟನೆಗಳು ಬಹಳ ಆಘಾತವಾಗಿದ್ದು, ನಾನು ಕೂಡ ನನ್ನ ತಂದೆಯನ್ನು ಕೆಲವು ದಿನಗಳ ಹಿಂದೆ ಕಳೆದುಕೊಂಡಿದ್ದೇನೆ. ನಮ್ಮವರನ್ನು ಕಳೆದುಕೊಂಡಾಗ ಆಗುವ ದುಃಖ ಏನು ಎಂಬುದು ನನಗೆ ತಿಳಿದಿದೆ. ಮಾನಸಿಕವಾಗಿ ನಮಗೆ ಆಘಾತ ಎದುರಾಗುತ್ತದೆ. ಕಾರಣವೇ ಇಲ್ಲದೆ ಚಿಕ್ಕ ವಯಸ್ಸಿನಲ್ಲಿ ತೀರಿಕೊಳ್ಳುತ್ತಿದ್ದಾರೆ. ಇದನ್ನು ಹೇಗೆ ಹಂಚಿಕೊಳ್ಳುವುದು, ಅರಗಿಸಿಕೊಳ್ಳುವುದು ಎನ್ನುವುದು ಅರ್ಥ ಆಗುತ್ತಿಲ್ಲ" ಎಂದು ಹೇಳಿದರು.
"ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ವಿಜಯ ರಾಘವೇಂದ್ರ ಅವರೊಟ್ಟಿಗೆ ನಾನು ಈ ಹಿಂದೆ ಕೆಲಸ ಮಾಡಿದ್ದೇನೆ. ಅವರ ಜೀವಮಾನದಲ್ಲಿ ಇಂತಹ ಘಟನೆ ಸಂಭವಿಸಬಾರದಿತ್ತು. ವಿಜಯ್ಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ" ಎಂದು ಹೇಳಿದರು.