ಚಿಕ್ಕಬಳ್ಳಾಪುರ: ಕುಡಿಯುವ ನೀರು ಪೂರೈಕೆಯ ಜಲ್ ಜೀವನ್ ಯೋಜನೆಯಡಿ ಜಿಲ್ಲೆಯಲ್ಲಿ 1640 ಕಾಮಗಾರಿಗಳಿಗೆ ಮಂಜೂರಾತಿ ಸಿಕ್ಕಿದೆ. ಆದರೆ, ಇಲ್ಲಿಯವರೆಗೂ ಪೂರ್ಣಗೊಂಡಿರುವುದು 139 ಮಾತ್ರ.
ಜಲ್ ಜೀವನ್ ಮಿಷನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆ. ರಾಜ್ಯದಲ್ಲಿ ಮನೆ ಮನೆಗೆ ಗಂಗೆ ಶೀರ್ಷಿಕೆಯಡಿ ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ, ಪ್ರತಿಯೊಬ್ಬರಿಗೂ ಪ್ರತಿದಿನ ೫೫ ಲೀಟರ್ ಶುದ್ದವಾದ ನೀರನ್ನು ಪೂರೈಸುವುದೇ ಮುಖ್ಯ ಉದ್ದೇಶವಾಗಿದೆ.
*2,47,566 ನಳ ಸಂಪರ್ಕ
ಜಿಲ್ಲೆಯಲ್ಲಿ 1811 ಜನ ವಸತಿ ಪ್ರದೇಶಗಳಲ್ಲಿ 2,47,566 ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು 1640 ಏಕ ಗ್ರಾಮ ಯೋಜನೆ ಮತ್ತು 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಇದರ ಕಾಮಗಾರಿಗಳಿಗೆ ಈಗಾಗಲೇ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಅದರಂತೆ ಉದ್ದೇಶಿತ ಎಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆದು, ಕಾರ್ಯಾದೇಶ ನೀಡಲಾಗಿದೆ. ಪ್ರಸ್ತುತ 1303 ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿದೆ.
*993 ಕೋಟಿ ರೂ ವೆಚ್ಚ
1640 (ಏಕಗ್ರಾಮ ಯೋಜನೆ) ಕಾಮಗಾರಿಗಳಿಗೆ 993.75 ಕೋಟಿ ರೂ ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದಿಂದ ಮೈಲಪನಹಳ್ಳಿ ಸುತ್ತಲಿನ 5 ಗ್ರಾಮಗಳು, ಪೈಪ್ ಲೈನ್ ಅಳವಡಿಕೆ, ಯದರಾಲಹಳ್ಳಿ ಕೆರೆಯಿಂದ ಮಂಡಿಕಲ್ಲು ಸೇರಿದಂತೆ 13 ಗ್ರಾಮಗಳು, ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆಯಿಂದ ಹಂಪಸAದ್ರ ಮತ್ತು ಗುಡಿಬಂಡೆ ತಾಲೂಕಿನ 28 ಗ್ರಾಮಗಳು, ಗೌರಿಬಿದನೂರು ತಾಲೂಕಿನ ದಂಡಿಗಾನಹಳ್ಳಿಯಿAದ 41 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ.