ಪುರಭವನದಲ್ಲಿ ಸನಾತನ ಗುರುಪರಂಪರ

guru
Published on

ಮಂಗಳೂರು: ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ಜುಲೈ 20ನೇ ಶನಿವಾರ ಸಂಜೆ 6.00ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ಗುರುಪರಂಪರ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಚಿಂತಕರಾದ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಸಮೂಹದ ರಂಗ ನಿರ್ದೇಶಕರು, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಕೀರ್ತಿ ಶೇಷ ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರ ಗುರುಸಂಸ್ಮರಣೆ ಹಿರಿಯ ಕಲಾ ವಿಮರ್ಶಕಿ ಗುರು ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಅವರಿಗೆ ಗುರು ನಮನ ಮತ್ತು ನೃತ್ಯ ಸೌರಭ ನಾಟ್ಯಾಲಯ ಉಳ್ಳಾಲ ಇದರ ನೃತ್ಯ ಗುರುಗಳಾದ ವಿದ್ವಾನ್ ಪ್ರಮೋದ್ ಉಳ್ಳಾಲ್ ಇವರಿಗೆ ಗುರುಪ್ರೇರಣ ಗೌರವ ನಡೆಯಲಿದೆ. ಬಳಿಕ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಇವರ ಹಿರಿಯ ಶಿಷ್ಯಯರಾದ ನಾಟ್ಯ ವಿದುಷಿಯರಾದ ಂಜನಾ ಭರತ್, ವೈಶ್ಯ ಶೆಟ್ಟಿ ಮತ್ತು ಕುಮಾರಿಯರಾದ ಕಾವ್ಯಶ್ರೀ, ದೀಪ್ತಿ ಐ., ಅಂಕಿತ ಬದಿಯಡ್ಕ ಮತ್ತು ಸಾಹಿತ್ಯ ಸುರೇಶ್ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net