ದ.ಆಫ್ರಿಕಾ ವಿರುದ್ಧ ಸರಣಿಯಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಸ್ಯಾಮ್ಸನ್-ತಿಲಕ್ ವರ್ಮ

New Project (1)
Published on

ಜೊಹಾನ್ಸ್‌ಬರ್ಗ್: ಎಡಗೈ ಬ್ಯಾಟರ್ ತಿಲಕ್ ವರ್ಮ (120* ರನ್, 47 ಎಸೆತ, 9 ಬೌಂಡರಿ,10 ಸಿಕ್ಸರ್) ಸತತ ಎರಡನೇ ಶತಕ ಹಾಗೂ ಆರಂಭಿಕ ಸಂಜು ಸ್ಯಾಮ್ಸನ್ (109* ರನ್, 56 ಎಸೆತ, 6 ಬೌಂಡರಿ, 9 ಸಿಕ್ಸರ್) ಬಿರುಸಿನ ಶತಕದಬ್ಬರದ ನೆರವಿನಿಂದ ರನ್‌ಪ್ರವಾಹ ಹರಿಸಿದ ಪ್ರವಾಸಿ ಭಾರತ ತಂಡ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 135 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಸೂರ್ಯಕುಮಾರ್ ಬಳಗ 4 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿತು. ಟಿ20 ವಿಶ್ವಚಾಂಪಿಯನ್ ತಂಡ 2024ರಲ್ಲಿ ಆಡಿದ ಕೊನೇ ಪಂದ್ಯ ಇದಾಗಿದ್ದು, ಹಾಲಿ ವರ್ಷ ಆಡಿದ 26 ಪಂದ್ಯಗಳಲ್ಲಿ 24ನೇ ಗೆಲುವು ಕಂಡಿದೆ.

ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಣಿ ನಿರ್ಣಾಯಕ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ, ಸ್ಯಾಮನ್ಸ್ - ತಿಲಕ್ ನಡೆಸಿದ ಮುರಿಯದ ದ್ವಿಶತಕದ ಭರ್ಜರಿ ಜತೆಯಾಟದ ನೆರವಿನಿಂದ 1 ವಿಕೆಟ್‌ಗೆ 283 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ವೇಗಿ ಅರ್ಷದೀಪ್ ಸಿಂಗ್ (20ಕ್ಕೆ3) ದಾಳಿಗೆ ತತ್ತರಿಸಿದ ದ.ಆಫ್ರಿಕಾ 10 ರನ್‌ಗಳಿಗೆ ಅಗ್ರ 4 ವಿಕೆಟ್ ಕಳೆದುಕೊಂಡಿತು. ಆಗ ಟ್ರಿಸ್ಟಾನ್ ಸ್ಟಬ್ಸ್ (43) ಹಾಗೂ ಡೇವಿಡ್ ಮಿಲ್ಲರ್ (36) ನಡೆಸಿದ ಹೋರಾಟ ಸೋಲಿನ ಅಂತರತಗ್ಗಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಹರಿಣ ಪಡೆ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು.

4ನೇ ಟಿ20 ಪಂದ್ಯದಲ್ಲಿ ದಾಖಲಾದ ದಾಖಲೆಗಳಿವು

1. ಸಂಜು ಸ್ಯಾಮ್ಸನ್-ತಿಲಕ್ ವರ್ಮ (210) ಭಾರತದ ಪರ ಟಿ20ಯಲ್ಲಿ ಯಾವುದೇ ವಿಕೆಟ್‌ಗೆ ದಾಖಲಿಸಿದ ಗರಿಷ್ಠ ರನ್ ಜತೆಯಾಟ ಇದಾಗಿದೆ.

2. ಭಾರತ ತಂಡ ಟಿ20ಯಲ್ಲಿ ಐಸಿಸಿ ಸಂಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ದಾಖಲಿಸಿದಎರಡನೇ ಗರಿಷ್ಠ ಮೊತ್ತ ಇದಾಗಿದೆ. ಹಾಲಿ ವರ್ಷ ಬಾಂಗ್ಲಾ ಎದುರು 297 ರನ್‌ಗಳಿಸಿದ್ದು ಮೊದಲ ಗರಿಷ್ಠ ಮೊತ್ತವಾಗಿದೆ.

23. ಭಾರತ ತಂಡ ಟಿ20 ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿತು. ಬಾಂಗ್ಲಾದೇಶ ಎದುರು ಹಾಲಿ ವರ್ಷ 22 ಸಿಕ್ಸರ್ ಬಾರಿಸಿದ್ದು ಹಿಂದಿನ ಗರಿಷ್ಠ.

2. ಟಿ20 ಇನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟರ್‌ಗಳು (ಐಸಿಸಿ ಸಂಪೂರ್ಣ ಸದಸ್ಯತ್ವ ತಂಡ) ಶತಕ ಸಿಡಿಸಿದ ಮೊದಲ ದೃಷ್ಟಾಂತ ಇದಾಗಿದೆ. ಒಟ್ಟಾರೆ ಟಿ20ನಲ್ಲಿ 7ನೇ ದೃಷ್ಟಾಂತ.

1. ಸಂಜು ಸ್ಯಾಮ್ಸನ್ (3) ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟಿ20 ಶತಕ ಸಿಡಿಸಿದ ಮೊದಲ ಬ್ಯಾಟರ್.

5.ತಿಲಕ್ ವರ್ಮ ಸತತ 2 ಇನಿಂಗ್ಸ್‌ಗಳಲ್ಲಿ ಟಿ20 ಶತಕ ಸಿಡಿಸಿದ 5ನೇ ಬ್ಯಾಟರ್. ಗುಸ್ಟವ್ ಮೆಕ್‌ನೆನ್, ರಿಲೀ ರೋಸ್ಸೌ, ಫಿಲ್ ಸಾಲ್ಟ್, ಸಂಜು ಸ್ಯಾಮ್ಸನ್ ಹಿಂದಿನ ಸಾಧಕರು.

4. ಸಂಜು ಸ್ಯಾಮ್ಸನ್ (4) ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು 50 ಪ್ಲಸ್ ರನ್‌ಗಳಿಸಿ ವಿಕೆಟ್ ಕೀಪರ್-ಬ್ಯಾಟರ್ ಎನಿಸಿದರು. ಕೆಎಲ್ ರಾಹುಲ್ (3), ಇಶಾನ್ ಕಿಶನ್ (2) ನಂತರದಲ್ಲಿದ್ದಾರೆ.

129. ಟಿ20 ಇನಿಂಗ್ಸ್‌ನ ಮೊದಲ ಹತ್ತು ಓವರ್‌ನಲ್ಲಿ ಭಾರತ ಕಲೆಹಾಕಿದ 2ನೇ ಗರಿಷ್ಠ ಮೊತ್ತ ಇದಾಗಿದೆ. ಬಾಂಗ್ಲಾದೇಶ ಎದುರು 152 ರನ್‌ಗಳಿರುವುದು ಗರಿಷ್ಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net