

ಹೈದ್ರಾಬಾದ್: ನಟಿ ಸಮಂತಾ ಸಿನಿಮಾದಿಂದ ಗ್ಯಾಪ್ ಪಡೆದುಕೊಂಡು ಸಂಪೂರ್ಣವಾಗಿ ಆರೋಗ್ಯದ ಮೇಲೆ ಗಮನ ಕೊಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ನಟಿ ಯಾರಿಗೂ ತಿಳಿಯದ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.
ಇತ್ತೀಚಿನ ಪೋಸ್ಟ್‌ನಲ್ಲಿ, ಸಮಂತಾ ಅವರು ವ್ಯಾಯಾಮ ಮಾಡುತ್ತಿರುವ ಫೋಟೋ, ಅವರಿದ್ದ ಸ್ಥಳದ ಸೌಂದರ್ಯವನ್ನು ತೋರಿಸುವ ಫೋಟೋಗಳು ಮತ್ತು ಅವರ ಆರೋಗ್ಯದ ನವೀಕರಣದ ಪೋಸ್ಟ್ ಮಾಡಿದ್ದಾರೆ. “ಬೆಳಗಿನ ಸೂರ್ಯನನ್ನು ನೋಡುವುದು… ಅತ್ಯುತ್ತಮ ರೀತಿಯ ಮುಂಜಾನೆ, ”ಎಂದು ಸಮಂತಾ ಬರೆದಿದ್ದಾರೆ.
ದೇಹದ ತೂಕ ಈಗ 50.1 ಕೆಜಿಯಂತೆ. 36 ವರ್ಷದ ಅವರ ಮೆಟಾಬಾಲಿಕ್ ಏಜ್ 23 ಎಂಬುದನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರ ದೇಹದಲ್ಲಿ 12 ಕೆಜಿ ಫ್ಯಾಟ್ ಮಾಸ್ ಇದೆಯಂತೆ. ಮಸಲ್ ಮಾಸ್ 35.9 ಕೆಜಿ, ಬೋನ್ ಮಾಸ್ 2.2 ಕೆಜಿ ಎಂಬುದನ್ನು ಸಮಂತಾ ವಿವರಿಸಿದ್ದಾರೆ.
ಇದರಲ್ಲಿ ಸಮಂತಾ ಅವರ ಮೆಟಾಬಾಲಿಕ್ ವಯಸ್ಸು 23 ವರ್ಷ, ಹೀಗಾಗಿ ನಿಜವಾದ ವಯಸ್ಸು ಎಷ್ಟು ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಸಾಮಾನ್ಯವಾಗಿ, ನಮ್ಮ ವಯಸ್ಸನ್ನು ಜನನದಿಂದ ವರ್ಷಗಳ ಸಂಖ್ಯೆ ಎಂದು ಲೆಕ್ಕಹಾಕಲಾಗುತ್ತದೆ. ಆದರೆ ವಯಸ್ಸನ್ನು ನಮ್ಮ ದೇಹದ ಆರೋಗ್ಯಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ನಮ್ಮ ಮೆಟಾಬಾಲಿಕ್ ಏಜ್ ನಮ್ಮ ನಿಜವಾದ ವಯಸ್ಸಿಗಿಂತ ಕಡಿಮೆಯಿದ್ದರೆ, ನಾವು ಹೆಚ್ಚು ಆರೋಗ್ಯಕರವಾಗಿರುತ್ತೇವೆ. ಅನೇಕ ಸೆಲೆಬ್ರಿಟಿಗಳು ತಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ಚಯಾಪಚಯ ವಯಸ್ಸನ್ನು ಹೊಂದಿದ್ದಾರೆ.